ಬೆಂಗಳೂರು: 
ನಗರದಲ್ಲಿ ಎಚ್‌ಪಿ ಕಂಪನಿಯ ಹೆಸರಿನಲ್ಲಿ ನಕಲಿ ಟೋನರ್ ಇಂಕ್ ನಂತಹ ಉತ್ಪನ್ನಗಳನ್ನು ತಯಾರಿಸುವುದು, ವಿತರಣೆ, ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿರುವ ನಗರ ಪೊಲೀಸರು 22 ಕೋಟಿ ಮೌಲ್ಯದ ನಕಲಿ ಉತ್ಪನ್ನಗಳನ್ನು ವಶ ಪಡಿಸಿಕೊಂಡಿದ್ದಾರೆ.
ದೆಹಲಿಯಲ್ಲಿ 33.5 ಕೋಟಿ ರೂ ಮೌಲ್ಯದ ಎಚ್‌ಪಿ ಹೆಸರಿನ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ ನಗರದಲ್ಲಿ 22 ಕೋಟಿ ಮೌಲ್ಯದ ನಕಲಿ ಉತ್ಪನ್ನಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳು ದೇಶಾದ್ಯಂತ 170 ಕ್ಕೂ ಕಡೆ ದಾಳಿ ನಡೆಸಿ ಎಚ್‌ಪಿ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 144 ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ ಅಪಾರ ಪ್ರಮಾಣದ ಕಾಟ್ರಿಡ್ಜ್‌ಗಳು, ಪ್ಯಾಕೇಜಿಂಗ್ ಉತ್ಪನ್ನಗಳು, ವಿವಿಧ ಬಗೆಯ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾಟ್ರಿಡ್ಜ್‌ಗಳು ಮತ್ತು ಲೇಬಲ್‌ಗಳನ್ನು ಎಚ್‌ಪಿ ಪ್ರಿಂಟ್ ಉತ್ಪನ್ನಗಳಿಗೆ ನಕಲಿ ಮಾಡಿ ಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು.
ಎಚ್‌ಪಿ ನಿರಂತರವಾಗಿ ಆಡಿಟ್ ಅನ್ನು ನಡೆಸುತ್ತಿದ್ದು, ಕಾನೂನು ಜಾರಿ ಏಜೆನ್ಸಿಗಳಿಗೆ ನಕಲಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಗಾರರ ವಿರುದ್ಧ ದಾಳಿ ನಡೆಸಲು ನೆರವಾಗುತ್ತಿದೆ. ಈ ಮೂಲಕ ನಕಲಿ ಉತ್ಪನ್ನಗಳಿಂದ ಗ್ರಾಹಕರು ಮತ್ತು ಕಂಪನಿಯ ವ್ಯವಹಾರವನ್ನು ರಕ್ಷಣೆ ಮಾಡಲು ಶ್ರಮಿಸುತ್ತಿದೆ. ಈ ಕಾರ್ಯಾಚರಣೆಯಿಂದ ಗ್ರಾಹಕರು ಮತ್ತು ಮಾರಾಟಗಾರರು ನಕಲಿ ಇಂಕ್ ಮತ್ತು ಟೋನರ್ ಅನ್ನು ಖರೀದಿ ಮಾಡುವುದನ್ನು ಕಡಿಮೆ ಮಾಡುತ್ತದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








