ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಬಿರ ಪ್ರಶಂಸನೀಯವಾದುದು

ತೋವಿನಕೆರೆ

    ಬೆಂಗಳೂರು ನಗರದ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಕಾರ್ಯನಿವರ್ಹಿಸುತ್ತಿರುವ ವ್ಯೆದ್ಯರು ಗ್ರಾಮೀಣ ಪ್ರದೇಶದಲ್ಲಿ ಉಚಿತ ಶಿಬಿರಗಳನ್ನು ನಡೆಸಿ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯವೆಂದು ಹಳ್ಳಿಸಿರಿ ಸಂಘದ ಅಧ್ಯಕ್ಷೆ ಮಂಜಮ್ಮ ಎಸ್ ಬಾಲಯ್ಯ ತಿಳಿಸಿದರು.

     ತೋವಿನಕೆರೆ ಆರೋಗ್ಯ ಚಕ್ರ ರೂರಲ್ ಸ್ಫೆಷಾಲಿಟಿ ಕ್ಲಿನಿಕ್ ವತಿಯಿಂದ ವಿಶ್ವ ಸಂಧಿವಾತ ದಿನದ ಅಂಗವಾಗಿ ಜಗದಾಂಬ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಉಚಿತ ಸಂಧಿವಾತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಹಳ್ಳಿಗಳ ಮಹಿಳೆಯರು ಹಾಗೂ ಪುರುಷರು ವಯಸ್ಸು ಆದ ನಂತರ ವಿವಿಧ ರೀತಿಯ ಕಾಯಿಲೆಗಳಿಂದ ನರಳುತ್ತಾರೆ. ನಗರ ಪ್ರದೇಶಕ್ಕೆ ತೆರಳಿ ಉತ್ತಮ ಚಿಕಿತ್ಸೆ ಪಡೆಯುವುದು ಕಷ್ಟ ಸಾಧ್ಯ. ಹಿರಿಯ ನಾಗರಿಕರು ಅದರಲ್ಲೂ ತಮಗೆ ಬರುವ ಕಾಲು ನೋವುಗಳನ್ನು ಸಹಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ನಗರಗಳಿಗೆ ಹೋಗಿ ಉತ್ತಮವಾದ ಚಿಕಿತ್ಸೆ ಪಡೆಯಲು ಎರಡು ಮೂರು ಕಾಯ ಬೇಕಾಗುತ್ತದೆ.

       ಇದಕ್ಕಾಗಿ ಸಾವಿರಾರು ರೂ. ಖರ್ಚು ಬರುತ್ತದೆ. ಬೆಂಗಳೂರು ನಗರದಲ್ಲಿ ಪ್ರತಿಷ್ಠಿತ ಆಸ್ಫತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಉನ್ನತ ಶಿಕ್ಷಣ ಪಡೆದಿರುವ ವ್ಯೆದ್ಯರು ತೋವಿನಕೆರೆಗೆ ಬಂದು ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವೆಂದರು.

      ವಿಶ್ವ ಸಂಧಿವಾತ ದಿನವಾದ ಇಂದು ಹಳ್ಳಿಯ ಜನರ ಸೇವೆ ಮಾಡುವ ಮೂಲಕ ಸಂಧಿವಾತ ದಿನಾಚರಣೆ ಮಾಡುತ್ತಿರುವ ವ್ಯೆದ್ಯರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹರ್ಷ ವ್ಯಕ್ತ ಪಡಿಸಿದರು. ವ್ಯೆದ್ಯರುಗಳು, ಮುಖಂಡರಾದ ಟಿ.ಆರ್.ನಾಗರಾಜು, ಅಂಗಡಿ ಪರಮೇಶ್ ಉಪಸ್ಥಿತರಿದ್ಧರು.

       ಮಣಿಪಾಲ್ ಅಸ್ಫತ್ರೆಯ ವ್ಯೆದ್ಯರುಗಳಾದ ಡಾ.ಜಿ.ಸಿ.ಯತೀಶ್, ಡಾ.ಯೋಗೇಶ್ ಪಿ.ಸಿಂಗ್, ಡಾ.ಪೂಜಾ ಮೂರ್ತಿ ಹಾಗೂ ಡಾ. ಶರತ್ ಕುಮಾರ್ ಶಿಬಿರದಲ್ಲಿ ಭಾಗವಹಿಸಿ ಸಲಹೆ ನೀಡಿದರು. ಸ್ವರೂಪ್ ಮಂಜುನಾಥ, ಗೀತಾ ಬಸವರಾಜು ಸಹಕಾರ ನೀಡಿದರು.
200 ಜನಕ್ಕೂ ಹೆಚ್ಚು ಜನರು ಸಂಧಿವಾತದ ಸಮಸ್ಯೆಯ ಬಗ್ಗೆ ಸಲಹೆ ಪಡೆದುಕೊಂಡರು. .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link