ದಾವಣಗೆರೆ :
ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ಸೈನಿಕರನ್ನು ರೇಪಿಸ್ಟ್‍ಗಳೆಂದು ಅಪಮಾನಿಸಿರುವ ಡಾ.ಶಿವಸ್ವಾಮಿನಾಥನ್‍ನನ್ನು ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಮಾಜಿ ಸೈನಿಕರು, ಗಡಿ ಕಾಯುವ ಮೂಲಕ ದೇಶವನ್ನು ರಕ್ಷಿಸುತ್ತಿರುವ ಯೋಧರ ಅವಹೇಳನ ಮಾಡಿ, ಅಪಮಾನ ಮಾಡಿರುವ ಡಾ.ಶಿವಸ್ವಾಮಿನಾಥನ್ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಶಿವವಿಶ್ವನಾಥನ್ ಅವರು ಗಡಿಕಾಯುವ ಸೈನಿಕರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಅಲ್ಲದೇ ಯೋಧರ ಆತ್ಮವಿಶ್ವಾಸ ಕುಗ್ಗಿಸುವ ಕೆಲಸಮಾಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸೈನಿಕರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವ ಶಿವಸ್ವಾಮಿನಾಥನ್‍ಗೆ ಸಾಹಿತ್ಯದ ಅನುಭವ ಇಲ್ಲದಿರುವುದು ಅವರ ಮಾತಿನಿಂದ ಸಾಬೀತಾಗಿದೆ. ಗಡಿಕಾಯುವ ಸೈನಿಕರು ಬಗ್ಗೆ ಹಗರುವಾಗಿ ಮಾತನಾಡಿದ ಇವರನ್ನು ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕು. ಹಾಗೂ ಬೆಂಗಳೂರಿನ ಯಲಹಂಕದಲ್ಲಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಸತ್ಯಪ್ರಕಾಶ್, ಉಪಾಧ್ಯಕ್ಷ ಎಮ್.ಎಸ್.ಮಹೇಂದ್ರಕರ್, ಒ.ಬಿ.ಶಶಿಕಾಂತ್. ವಾಸಪ್ಪ, ನಾಗರಾಜಪ್ಪ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ