ಹೊಸಪೇಟೆ :
7ನೇ ಆರ್ಥಿಕ ಗಣತಿಯ ಅಂಗವಾಗಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಂಕೀರ್ಣಗಳಲ್ಲಿ ನಡೆಯುತ್ತಿರುವ ವ್ಯಾಪಾರ, ಉದ್ಯಮದ ಬಗ್ಗೆ ಮಾಹಿತಿಯನ್ನು ಗಣತಿದಾರರಿಗೆ ಜನರು ಸಮರ್ಪಕವಾಗಿ ನೀಡಬೇಕು ಎಂದು ತಹಶೀಲ್ದಾರ ವಿಶ್ವನಾಥ ಹೇಳಿದರು.
ಇಲ್ಲಿನ ತಹಶೀಲ್ದಾರರ ಕಛೇರಿ, ಸಭಾಂಗಣದಲ್ಲಿ ಶುಕ್ರವಾರ ಗಣತಿಯ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗಣತಿ ವೇಳೆ ಮನೆಗಳಲ್ಲಿ ನಡೆಯುವ ಹೈನುಗಾರಿಕೆ, ಹೊಲಿಗೆ, ಅಂಗಡಿ ಸೇರಿ ವಾಣಿಜ್ಯ ಕಟ್ಟಡಗಳಲ್ಲಿನ ಉದ್ಯಮಗಳ ಬಗ್ಗೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಈ ಮಾಹಿತಿ ಆಧರಿಸಿ ನಿರ್ಧಿಷ್ಟ ಉದ್ಯಮಗಳಿಗೆ ನೀಡಬೆಕಾದ ಸೌಲಭ್ಯ ಬಗ್ಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ಟಿ.ಲಕ್ಷ್ಮಣರಾವ್ ಹಾಗೂ ಜಿಲ್ಲಾ ಸಂಯೋಜಕರಾದ ನಾಗರಾಜ್, ವಿ.ಎಲ್.ಇ.ಗಳಾದ ಎಂ.ಶ್ರೀದೇವಿ, ಜಗದೀಶ್ ಕೆಂಬಾವಿಮಠ್, ಮಾರುತಿ, ಮಂಜುನಾಥ.ಪಿ., ರವಿಕುಮಾರ್ ಹಾಗೂ ಗಣತೀದಾರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
