ಬೆಂಗಳೂರು
ಹೋಟೆಲ್‍ನಲ್ಲಿ ದೊಸೆ ಹಿಟ್ಟು ರುಬ್ಬುವಾಗ ಗ್ರೈಂಡರ್ ಯಂತ್ರದಿಂದ ವಿದ್ಯುತ್ ತಗುಲಿ ಹೋಟೆಲ್ ಕಾರ್ಮಿಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಾಬಸ್ ಪೇಟೆಯ ಕಾಮತ್ ಹೋಟೆಲ್ ಕಾರ್ಮಿಕ ಮಂಜುನಾಥ್ (20)ಎಂದು ಮೃತರನ್ನು ಗರುತಿಸಲಾಗಿದೆ ಗುರುವಾರ ರಾತ್ರಿ ಹೋಟೆಲ್‍ನಲ್ಲಿ ದೊಸೆ ಹಿಟ್ಟು ರುಬ್ಬುವಾಗ ಗ್ರೈಂಡರ್‍ನಿಂದ ವಿದ್ಯುತ್ ತಗುಲಿದ್ದು, ತಕ್ಷಣ ಚಿಕಿತ್ಸೆಗಾಗಿ ಡಾಬಸ್ ಪೇಟೆಯ ಆರೋಗ್ಯ ಭಾರತಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ್ ಸಾವನ್ನಪ್ಪಿದ್ದಾನೆ.
ಮೃತ ಕಾರ್ಮಿಕ ಮಂಜುನಾಥ ಶಿರಾ ತಾಲೂಕಿನ ದೊಡ್ಡಗುಳ ಗ್ರಾಮದ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ಕಾಮತ್ ಹೋಟೆಲ್‍ನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಡಾಬಸ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ರೈಲಿಗೆ ಸಿಕ್ಕಿ ಸಾವು
ಜೀವನದಲ್ಲಿ ಜಿಗುಪ್ಸೆ ಆಗಿ ಮಹಿಳೆಯೊಬ್ಬರು ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವನಹಳ್ಳಿ ತಾಲೂಕಿನ ನಿರುಗುಂಟಿ ಪಾಳ್ಯದ ಬಳಿ ನಡೆದಿದೆ.
ನಿಲೇರಿ ಗ್ರಾಮದ ಚಂದ್ರಮ್ಮ ನಿರುಗಂಟಿ ಪಾಳ್ಯ ರೈಲ್ವೆ ಟ್ರಾಕ್ ಬಳಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹ ನೋಡಿ ಸ್ಥಳೀಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಯಲಹಂಕ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತರ ಮಗ ಮಂಜುನಾಥ್ ಮಾತನಾಡಿ, ನಮ್ಮ ಅಮ್ಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಕಳೆದ ಆರು ತಿಂಗಳ ಹಿಂದೆ ನಮ್ಮ ತಂದೆಯವರು ಸಾವನ್ನಪ್ಪಿದ್ದು, ಇದರಿಂದ ಮತ್ತಷ್ಟು ಮಾನಸಿಕವಾಗಿ ಕುಗ್ಗಿದ್ದರು. ಗುರುವಾರ ರಾತ್ರಿ ಮನೆ ಬಿಟ್ಟು ಹೋದವರು ವಾಪಸ್‍ಬಂದಿಲ್ಲ. ನಾವು ಕೂಡ ರಾತ್ರಿಯೆಲ್ಲ ಹುಡುಕಾಟ ನಡೆಸಿದ್ದೆವು. ಬೆಳಗ್ಗೆ ರೈಲ್ವೆ ಟ್ರಾಕ್ ಬಳಿ ನಮ್ಮ ಅಮ್ಮ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ ಎಂದು ಮಂಜುನಾಥ್ ಹೇಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
