ಬೆಂಗಳೂರು:
ನನಗೆ ಮಾನಸಿಕವಾಗಿ ಬೇಸರವಾಗಿದ್ದರಿಂದ ಬಜೆಟ್ ಅಧಿವೇಶನಕ್ಕೆ ಹೋಗಿಲ್ಲ ಎಂದು ಹಾವೇರಿ ಜಿಲ್ಲೆ ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿ ಮಾತನಾಡಿದ ಅವರು, ಮುಂಜಾನೆ ಸಿಎಂ ಕುಮಾರಸ್ವಾಮಿ ತಮ್ಮ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಅತೃಪ್ತರನ್ನು ಸರಿಪಡಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ನಾನು ಮುಂಬೈಗೆ ಹೋಗಿಲ್ಲ. ಮನಸ್ಸಿಗೆ ಬೇಸರ ಆಗಿದ್ದರಿಂದ ಮನೆಯಲ್ಲಿ ಇದ್ದೆ ಎಂದರು.
ಮಾಧ್ಯಮಗಳಲ್ಲಿ ತೋರಿಸಿದ ಫೋಟೋ ನನ್ನದಲ್ಲ ಎಂದು ಪಾಟೀಲ್ ಸ್ಪಷ್ಟನೆ ನೀಡಿದರು. ನನಗೆ ಅಸಂತೋಷ, ಅತೃಪ್ತಿಯಾಗಿರುವುದು ನಿಜ. ಈ ಕುರಿತಂತೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯರನ್ನ ಮುಂಜಾನೆ ಭೇಟಿ ಮಾಡಿ ಬಂದಿರುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದರು.