ಕಾನೂನು ಅರಿವು ಮತ್ತು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮ

ಪಾವಗಡ:

    ಪ್ರತಿಯೊಬ್ಬರಿಗೂ ಕಾನೂನನ್ನು ತಿಳಿದುಕೊಳ್ಳುವುದರಿಂದ ಜಾಗೃತಗೊಂಡು ಅಪರಾದಗಳಾಗದಂತೆ ಹೆಚ್ಚರಿಸುತ್ತದೆ ಎಂದು ಪಾವಗಡ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ತಿಳಿಸಿದರು.

       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪುರಸಭೆ, ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಪಾವಗಡ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ವೋಚ್ಚ ನ್ಯಾಯಾಲಯದ ನಿರ್ಧೇಶನದಂತೆ ಸಮಾಜದಲ್ಲಿ ಮುಖ್ಯವಾಹಿನಿಯಿಂದ ದೂರವಿರುವವರಿಗೆ ಕಾನೂನಿನ ಅರಿವು ಅಗತ್ಯವಿದೆ, ನಾಗರೀಕ ಸಮಾಜಕ್ಕೆ ಉತ್ತಮ ಕಾನೂನಿನ ಅರಿವು ಮತ್ತು ನೆರವನ್ನು ನೀಡಲಾಗಿದೆ, ಕಾನೂನು ಅರಿವು ಮತ್ತು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮವನ್ನು ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದರು.

      ಅಧಿಕ ಸಿವಿಲ್ ನ್ಯಾಯಾಧೀಶರಾದ ಎಸ್.ಸಿದ್ದರಾಮ ರವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಷ್ಟೇ ಅಲ್ಲದೆ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲೂ ಕಾನೂನಿನ ಅರಿವು ಕೊರತೆ ಎದ್ದು ಕಾಣುತ್ತದೆ, ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು, ವೃದ್ದರು, ಸಾಮನ್ಯರು ವ್ಯವಸ್ಥೆಯಲ್ಲಿನ ಅವಕಾಶಗಳಿಂದ ವಂಚಿತರಾಗಿದ್ದಾರೆ.

      ತಾಲ್ಲೂಕಿನಾದ್ಯಂತ ನಾಲ್ಕು ದಿನಗಳ ಕಾಲ ಕಾನೂನು ಸಾಕ್ಷರತಾ ರಥವು ನುರಿತ ಅನುಭವಿ ಕಾನೂನು ತಜ್ಞರೊಂದಿಗೆ ನಾನಾ ಸ್ಥಳಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ್ದು ಅನೇಕ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.

       ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಭರತ್ ಯೋಗೀಶ್ ಕರಗುದರಿ ಮಾತನಾಡಿ, ಸಂವಿಧಾನವು ಎಲ್ಲರೂ ಸಮನಾಗಿ ಆತ್ಮಗೌರವದಿಂದ ಬದುಕಲು ಅವಕಾಶನೀಡಿದೆ, ಕಾನೂನಿನ ಸೂಕ್ತ ಅರಿವಿಲ್ಲದೆ ಕೆಲವು ಹಕ್ಕುಗಳನ್ನು ಅನುಭವಿಸಲಾಗಿತ್ತಿಲ್ಲ, ಕಾನೂನಿನ ಅರಿವಿದ್ದರೆ ಯಾರ ನೆರವೂ ಇಲ್ಲದೆ ಸಮಾಜನದಲ್ಲಿ ಮುನ್ನುಗ್ಗಬಹುದು, ಶೋಷಣೆ ಮತ್ತು ದಬ್ಬಾಳಿಕೆಗಳಿಗೂ ಕಡಿವಾಣ ಹಾಕಬಹುದು ಎಂದು ತಿಳಿಸಿದರು.

      ಸಹಾಯಕ ಸರ್ಕಾರಿ ಅಭಿಯೋಜಕ ವಿ.ಮಂಜುನಾಥ್ ಮಾತನಾಡಿ,ಉಚಿತ ಕಾನೂನು ನೆರವು, ಜನತಾ ನ್ಯಾಯಾಲಯ, ಮತ್ತು ಪೊಲೀಸ್ ಇಲಾಖೆಯವರು ಅಪರಾದ ಕೃತ್ಯಗಳನ್ನು ದಾಖಲಿಸುವ ವಿಧಗಳು ಮತ್ತು ಪರಿಣಾಮಗಳನ್ನು ವಿವರಿಸಿದರು.
ಪೊಲೀಸ್ ಠಾಣೆಯ ಎಸ್.ಐ. ಮಧುಸೂಧನ್ ಮಾತನಾಡಿದರು

       ಅರಸೀಕೆರೆ ಪೋಲೀಸ್ ಠಾಣೆಯ ಎಸ್.ಐ. ರಾಮಯ್ಯ, ವಕೀಲರ ಸಂಘದ ಅಧ್ಯಕ್ಷ ರಂಗನಾಥಪ್ಪ, ಕಾರ್ಯದರ್ಶಿ ನರಸಿಂಹಲು, ಪಾವಗಡ ಪೊಲೀಸ್ ಠಾಣಾ ಸಿಬ್ಬಂದಿ, ವಕೀಲರು, ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap