“ವಾರದ ಕಥೆ ಕಿಚ್ಚನ ಜೊತೆ’ ರೆಕಾರ್ಡಿಂಗ್ ನಲ್ಲಿ ಕಿಚ್ಚ ಸುದೀಪ್….!!!

0
45

ಬೆಂಗಳೂರು:

         ಐಟಿ ದಾಳಿಯಿಂದ ಕಂಗೆಟ್ಟಿದ ಚಂದನವನದ ತಾರೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಅದರಲ್ಲಿ ಪ್ರಮುಖವಾಗಿ ಅಭಿಮಾನಿಗಳ ಪಾಲಿನ ಕಿಚ್ಚ  ಸುದೀಪ್ ಅವರ ಮನೆ ಮೇಲೆ ಐಟಿ ದಾಳಿ ನಡೆದ ಕಾರಣ ಬಿಗ್ ಬಾಸ್ ಕಾರ್ಯಕ್ರಮ ನಡೆಯುವುದು ಅನುಮಾನ ಎಂಬ ಆತಂಕ ಕಾಡುತ್ತಿತ್ತು.

          ಸತತ ಮೂರನೇ ದಿನ ಪರಿಶೀಲನೆ ನಡೆದ ಕಾರಣ ‘ವಾರದ ಕಥೆ ಕಿಚ್ಚನ ಜೊತೆ’ ರೆಕಾರ್ಡಿಂಗ್ ಮಾಡಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿತ್ತು.

          ಆದರೆ, ಬೆಳಗ್ಗೆಯೇ ಸುದೀಪ್ ಅವರ ಮನೆ ಪರಿಶೀಲನೆ ಅಂತ್ಯವಾಗಿದ್ದು, ಬಿಗ್ ಬಾಸ್ ಶೋಗೆ ಇದ್ದ ಆತಂಕ ದೂರವಾಗಿದೆ. ಎಂದಿನಂತೆ ಸುದೀಪ್ ಅವರು ಬಿಗ್ ಬಾಸ್ ವಾರಾಂತ್ಯದ ರೆಕಾರ್ಡಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಗ್ ಬಾಸ್ ತಂಡ ಸ್ಪಷ್ಟ ಪಡಿಸಿದೆ. ಇದಕ್ಕೂ ಮುಂಚೆ ಈ ವಿಷ್ಯವನ್ನ ಸ್ವತಃ ಬಿಗ್ ಬಾಸ್ ಆಯೋಜಕರಾದ ಪರಮೇಶ್ವರ ಗುಂಡ್ಕಲ್ ಅವರೇ ಸ್ಪಷ್ಟಪಡಿಸಿದ್ದರು.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here