ನೂತನ ದಾಖಲೆ ಬರೆದ ಕೆ ಅರ್ ಎಸ್ ಜಲಾಶಯ..!

ಮಂಡ್ಯ:

   ಮಂಡ್ಯ ಜಿಲ್ಲೆಯ ರೈತರಿಗೆ ಜೀವನಾಡಿಯಾಗಿರುವ ಕೆ ಆರ್ ಎಸ್ ಜಲಾಶಯವು ಹೊಸ ದಾಖಲೆಯೊಂದನ್ನು ನಿರ್ಮಿಸಿದೆ ,ಅದೇನೆಂದರೆ ನೀರಿನ ದೀರ್ಘಕಾಲಿಕ ಸಂಗ್ರಹ ಮತ್ತು ಒಳ ಮತ್ತು ಹೊರ ಹರಿವಿನ ಸಮತೋಲನ ಕಾಯ್ದುಕೊಳ್ಳುವಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. 

   2006 ರ ಬಳಿಕ ಭರ್ತಿಯಾಗಿ ಧೀರ್ಘಕಾಲ ಉಳಿದ ಕೀರ್ತಿಗೆ ಕೃಷ್ಣರಾಜಸಾಗರ ಜಲಾಶಯ ಪಾತ್ರವಾಗಿದೆ. ಕೆಆರ್ ಎಸ್ ಅಣೆಕಟ್ಟು 120.80 ಅಡಿ ತುಂಬಿ 50 ದಿನಗಳು ಕಳೆದಿದ್ದು, 2006 ವರ್ಷ ಹೊರತು ಪಡಿಸಿದರೇ ಇದೇ ಮೊದಲ ಬಾರಿಗೆ 50 ದಿನಗಳ ತನಕ ತುಂಬಿದೆ. ಇದೀಗ 60ನೇ ದಿನತ್ತ ಕಾಲಿಟ್ಟಿದ್ದು ಹೀಗೆ ವರುಣನ ಕೃಪೆ ಇದ್ದರೆ ಶತದಿನೋತ್ಸವನ್ನು ಆಚರಿಸುವುದೇನು ಅಚ್ಚರಿಯೇನು ಅಲ್ಲಾ ಎನ್ನಲಾಗಿದೆ. 

   ನಾಲ್ಕು ವರ್ಷಗಳ ಕಾಲ ರಾಜ್ಯ ತೀವ್ರ ಬರದಿಂದ ತತ್ತರಿಸಿ ಹೋಗಿದ್ದ ಜಲಾಶಯ ಇದೀಗ ತುಂಬಿ ತುಳುಕುತ್ತಿದೆ ಕಾವೇರಿ ಕೊಳ್ಳದಲ್ಲಿ ಸುರಿಯುತ್ತಿರುವ ಸತತ ಮಳೆ ಜಲಾಶಯ ದೀರ್ಘಕಾಲದವರೆಗೆ ಭರ್ತಿಯಾಗುವಂತೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನು  2006ರ ದಾಖಲೆ ನೋಡುವುದಾದರೆ 90 ದಿನ ತುಂಬಿ ದಾಖಲೆ ಮಾಡಿತ್ತು. ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಒಳ ಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಕುಶಾಲನಗರ, ಕೆಆರ್​ ನಗರ, ಹುಣಸೂರು ವ್ಯಾಪ್ತಿಯಲ್ಲಿ ಮಳೆ ಶುರುವಾಗಿದ್ದು, ನದಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ನಿನ್ನೆ ಸಂಜೆಯಿಂದಲೇ 4 ಸಾವಿರ ಕ್ಯೂಸೆಕ್​ ಗೂ ಹೆಚ್ಚು ನೀರು ಕಟ್ಟೆಗೆ  ಹರಿದು ಬರುತ್ತಿದೆ, ಇಂದು ಬೆಳಗ್ಗೆ ಇದು 10 ಸಾವಿರ ಕ್ಯೂಸೆಕ್​ ದಾಟಿತ್ತು .ಇನ್ನೂ ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು,ಸದ್ಯಕ್ಕೆ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ, ಮುನ್ನೆಚ್ಚರಿಕೆಯಾಗಿ ಹೊರ ಹರಿವಿನ ಪ್ರಮಾಣ ಹೆಚ್ಚಳ ಮಾಡಲಾಗುವುದು  ಎಂದು  ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು  ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link