ಬೆಂಗಳೂರು:
ಯಾದಗಿರಿ ಶಾಸಕ ನಾಗನಗೌಡರಿಗೆ ಅವರ ಮಗ ಶರಣಗೌಡರ ಮೂಲಕ ಆಮಿಷ ಒಡ್ಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ನಾನು ಅವರ ತವರು ಜಿಲ್ಲೆಯವನು ಎಂದು ನನ್ನನ್ನು ಅವರು ನೆನಪಿಸಿಕೊಂಡಿರಬೇಕು ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ವಿಧಾಸಭೆ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದುರ್ಗದ ವೀರಗೋಡುವಿನ ಅಡವಿ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ನಿಜ. ಫೆಬ್ರವರಿ 19 ರಂದು ಅಡವಿಲಿಂಗೇಶ್ವರ ದೇವಸ್ಥಾನದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದ್ದು, 1.96 ಲಕ್ಷ ಭಕ್ತರಿಂದ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಇದೆ. ಹಾಗಾಗಿ ನಾನು ಭೇಟಿ ನೀಡಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ದೇವದುರ್ಗ ಭೇಟಿ ಹಿಂದೆ ಯಾವುದೇ ರಾಜಕೀಯ ಕಾರಣ ಇಲ್ಲ. ಸಿಎಂ ನೀಡಿದ ಹೇಳಿಕೆ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.