ತಿಪಟೂರು.
ತಾಲ್ಲೂಕಿನಲ್ಲಿ ಬರಗಾಲವಿದ್ದು ಜಾನುವಾರುಗಳಿಗೆ ಮೇವು ಇಲ್ಲದಿರುವ ಪ್ರಯುಕ್ತ ಈ ಮೇವು ಬ್ಯಾಂಕ್‍ಅನ್ನು ತೆರಿದ್ದು ಇದನ್ನು ಸದ್ವಿನಿಯೋಗಪಡಿಸಿಕೊಳ್ಳಿ ಎಂದು ತಹಸೀಲ್ದಾರ್ ಆರತಿ.ಬಿ ತಿಳಿಸಿದರು.
ತಾಲ್ಲೂಕಿನಲ್ಲಿ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ಹೊನ್ನವಳ್ಳಿ ಹೋಬಳಿಯ ಬಾಗುವಾಳದ ಮುನಿಯಪ್ಪನ ಆಲದಮರ ಪ್ರದೇಶದಲ್ಲಿ ಮೇವು ಬ್ಯಾಂಕ್ ಪ್ರಾರಂಭಿ ಇಂದು ರೈತರ ರಾಸುಗಳಿಗೆ, ತಲಾ ರಾಸಿಗೆ 5 ಕಿಲೋ ಒಣ ಬತ್ತದ ಹುಲ್ಲನ್ನು ನೀಡಿದರು. ರೈತರು ಮತ್ತು ಜಾನುವಾರುಗಳಿಗೆ ಹೆಚ್ಚಿನ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಪ್ರತೀ ಹೋಬಳಿಯ ಎರಡು, ಮೂರು ಕಡೆ ಮೇವು ಬ್ಯಾಂಕ್‍ಗಳನ್ನು ತೆರೆಯಲಾಗುವುದು, ಹಾಗೂ ಪ್ರತಿದಿನವೂ ಗೋಶಾಲೆಗೆ ಬಂದು ಹೋಗುವುದನ್ನು ತಪ್ಪಿಸುವ ಸಲುವಾಗಿ ಒಂದೇ ಬಾರಿ 15 ದಿನಗಳಿಗಾಗುವಷ್ಟು ಮೇವನ್ನು ನೀಡಲಾಗುವುದು.
ಈಗಾಗಲೇ ತಾಲ್ಲೂಕಿನ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ. ರೈತರು ಪ್ರತೀ ಕಿ.ಲೋ ಮೇವಿಗೆ 2 ರೂ ಮಾತ್ರ ಭರಿಸಬೇಕು ಎಂದರು. ಈ ಗಾಗಲೇ ಮೇವು ಪೂರೈಕೆಗೆ ಟೆಂಡರ್ ಆಗಿದ್ದು 1 ಟನ್‍ಗೆ 10,900 ರೂ ಟೆಂಡರ್‍ದಾರರಿಗೆ ಪಾವತಿಸಲಾಗುತ್ತಿದೆ. ಎಲ್ಲಾಕರೆ ಅಕ್ರಮಗಳನ್ನು ತಡೆಯಲು ಸಿ.ಸಿ.ಟಿ.ವಿ ಕಣ್ಗಾವಲನ್ನು ಹಾಕಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
