ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ `ಸ್ಟಡ್ಸ್ & ಡ್ರಾಪ್ಸ್ ಉತ್ಸವ’ಕ್ಕೆ ಚಾಲನೆ

ಬೆಂಗಳೂರು:

    ವಿಶ್ವದೆಲ್ಲೆಡೆ 260 ಕ್ಕೂ ಹೆಚ್ಚು ಔಟ್‍ಲೆಟ್‍ಗಳನ್ನು ಹೊಂದಿರುವ ಜಾಗತಿಕ ಮಟ್ಟದಲ್ಲಿ ಸದೃಢ ರೀಟೇಲ್ ಜಾಲವನ್ನು ಹೊಂದಿರುವ ಭಾರತೀಯ ಜ್ಯುವೆಲ್ಲರಿ ಬ್ರ್ಯಾಂಡ್ ಮಲಬಾರ್ ಗೋಲ್ಡ್ & ಡೈಮಂಡ್ಸ್ ಗ್ರಾಹಕರಿಗಾಗಿ ವಿಸ್ತಾರವಾದ ಸ್ಟಡ್ಸ್, ಡ್ರಾಪ್ಸ್ ಮತ್ತು ಕಿವಿಯೋಲೆಗಳ ಸಂಗ್ರಹದ ಸ್ಟಡ್ಸ್ & ಡ್ರಾಪ್ಸ್ ಉತ್ಸವಕ್ಕೆ ಚಾಲನೆ ನೀಡಿದೆ. ಈ ಉತ್ಸವ ದೇಶದ ಎಲ್ಲಾ ಶೋರೂಂಗಳಲ್ಲಿ ಸೆಪ್ಟೆಂಬರ್ 25 ರವರೆಗೆ ನಡೆಯುತ್ತಿದೆ.

    ಚಿನ್ನ, ವಜ್ರ ಮತ್ತು ಅತ್ಯಮೂಲ್ಯವಾದ ಸ್ಟೋನ್‍ಗಳಿಂದ ತಯಾರಿಸಲಾಗಿರುವ ಸ್ಟಡ್ಸ್ ಮತ್ತು ಡ್ರಾಪ್ಸ್‍ಗಳ ವಿಸ್ತಾರವಾದ ಸಂಗ್ರಹ ಈ ಉತ್ಸವದಲ್ಲಿದೆ.ಮಾಡರ್ನ್, ಸ್ಟೈಲಿಶ್, ಸಾಂಪ್ರದಾಯಿಕ, ಸಮಕಾಲೀನ ವಿನ್ಯಾಸದ ಆಭರಣಗಳನ್ನು ಗ್ರಾಹಕರ ಮುಂದಿಡುತ್ತಿದೆ. ಈ ಮೂಲಕ ಆಭರಣ ಪ್ರಿಯರನ್ನು ಆಕರ್ಷಿಸುತ್ತಿದೆ. ಯುವಸಮೂಹ, ಉದ್ಯೋಗಸ್ಥ ಮಹಿಳೆಯರು ಸೇರಿದಂತೆ ಪ್ರತಿಯೊಂದು ವರ್ಗದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತು ವಿಶೇಷ ಸಂದರ್ಭಗಳು, ದೈನಂದಿನ ಬಳಕೆಗೆ ಸೇರಿದಂತೆ ಎಲ್ಲಾ ಸಂದರ್ಭಗಳಿಗೂ ಒಪ್ಪುವಂತಹ ರೀತಿಯಲ್ಲಿ ಈ ಆಭರಣಗಳನ್ನು ಸಿದ್ಧಪಡಿಸಲಾಗಿದೆ.

     ಈ ಸಂಗ್ರಹವು ಕೇವಲ ಅತ್ಯಂತ ಹಗುರವಾದ ಮತ್ತು ಪಾರ್ಟಿವೇರ್‍ಗೆ ಸೀಮಿತವಾಗಿಲ್ಲ. ಸಮಕಾಲೀನ ಮತ್ತು ವಧುವಿಗೆ ಅಗತ್ಯವಾದ ಆಭರಣಗಳ ಸಂಗ್ರಹವನ್ನೂ ಹೊಂದಿದೆ. ಇದಲ್ಲದೇ, ವಿಶಿಷ್ಟ ರೀತಿಯ ಆಭರಣವನ್ನು ಖರೀದಿಸುವ ಅವಕಾಶವನ್ನೂ ಕಲ್ಪಿಸುತ್ತಿದೆ. ಸ್ಟಡ್ಸ್ & ಡ್ರಾಪ್ಸ್ ಉತ್ಸವವು ಫೈನ್ ಆಟ್ರ್ಸ್‍ನ ಪ್ರತೀಕದಂತಿದೆ. ಸ್ಟಡ್ಸ್ & ಡ್ರಾಪ್ಸ್ ಉತ್ಸವದೊಂದಿಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ 22 ಕ್ಯಾರಟ್‍ನ ಹಳೆಯ ಚಿನ್ನದ ವಿನಿಮಯಕ್ಕೆ ಶೂನ್ಯ ಕಡಿತ ಸೌಲಭ್ಯವನ್ನು ಒದಗಿಸುತ್ತಿದೆ. ಗ್ರಾಹಕರು ಈ ಆಭರಣವನ್ನು ಎಲ್ಲಿಯೇ ಖರೀದಿ ಮಾಡಿದ್ದರೂ ಚಿಂತೆಯಿಲ್ಲ್ಲ. ಯಾವುದೇ ಕಡಿತವಿಲ್ಲದೇ ನಿಖರವಾದ ದರದಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶವಿದ್ದು, ಈ ಸೌಲಭ್ಯ ಎಲ್ಲಾ ಶೋರೂಂಗಳಲ್ಲಿಯೂ ಲಭ್ಯವಿದೆ.

     ಮಲಬಾರ್ ಗೋಲ್ಡ್ & ಡೈಮಂಡ್ಸ್ ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಾಭರಣಗಳನ್ನು ಮತ್ತು ಬಿಐಎಸ್ ಹಾಲ್‍ಮಾರ್ಕ್ 916 ಇರುವ ಚಿನ್ನಾಭರಣವನ್ನು ಮಾರಾಟ ಮಾಡುತ್ತದೆ. ಪಿಜಿಐ ಪ್ರಮಾಣೀಕೃತ ಪ್ಲಾಟಿನಂ ಆಭರಣಗಳು ಮತ್ತು ಹಾಲ್‍ಮಾರ್ಕ್ ಹೊಂದಿದ ಬೆಳ್ಳಿಯ ಆಭರಣಗಳು ಇಲ್ಲಿವೆ. ಇಲ್ಲಿ ಪ್ರತಿಯೊಂದು ಚಿನ್ನಾಭರಣಕ್ಕೆ ನಿಗದಿತ ದರ ಪಟ್ಟಿ ಇರುತ್ತದೆ. ಇದಲ್ಲದೇ, ಮೇಕಿಂಗ್ ಚಾರ್ಜ್, ಚಿನ್ನದ ತೂಕ, ಸ್ಟೋನ್ ದರಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಜೀವನಪರ್ಯಂತ ಖಚಿತ ಮೇಂಟೇನೆನ್ಸ್, ಒಂದು ವರ್ಷದ ಉಚಿತ ವಿಮೆ ಮತ್ತು ಬೈಬ್ಯಾಕ್ ಗ್ಯಾರಂಟಿ ಸೇರಿದಂತೆ ಇನ್ನಿತರೆ ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.

    ನಮ್ಮ ಎಲ್ಲಾ ಶೋರೂಂಗಳಲ್ಲಿಯೂ ಕ್ಯಾರಾಮೀಟರ್ ಲಭ್ಯವಿರುತ್ತದೆ. ಇದರ ಮೂಲಕ ಗ್ರಾಹಕರು ತಾವು ಖರೀದಿಸುವ ಚಿನ್ನಾಭರಣಗಳ ಶುದ್ಧತೆಯನ್ನು ಪರಿಶೀಲಿಸಬಹುದು. ಇದು ಚಿನ್ನದ ಶುದ್ಧತೆಯ ನಿಖರವಾದ ಅಳತೆಯನ್ನು ನೀಡುತ್ತದೆ.ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತ, ಸಿಂಗಾಪುರ, ಮಲೇಷ್ಯಾ ಮತ್ತು ಜಿಸಿಸಿ ರಾಷ್ಟ್ರಗಳಾದ ಯುಎಇ, ಒಮಾನ್, ಕತಾರ್, ಬಹರೇನ್, ಕುವೈತ್ ಮತ್ತು ಸೌದಿ ಅರೇಬಿಯಾ ಸೇರಿದಂತೆ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದುವ ಮೂಲಕ ಆಭರಣಗಳ ರೀಟೇಲ್ ವ್ಯವಹಾರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಯಾಗಿದೆ. ಕಂಪನಿಯು ಆಭರಣಗಳ ತಯಾರಿಕೆಯಲ್ಲಿ ಮತ್ತು ವಿನ್ಯಾಸಗೊಳಿಸುವಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಸ್ಟೈಲ್‍ಗಳನ್ನು ಅನುಸರಿಸುತ್ತಿದೆ.

    ಬರುವ ಲಾಭದಲ್ಲಿನ ಶೇ.5 ರಷ್ಟು ಹಣವನ್ನು ಜನೋಪಕಾರಿ ಕಾರ್ಯಗಳಿಗೆ ಬಳಸುತ್ತಿದೆ. ಇದರಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಬಡವರಿಗೆ ಮನೆಗಳ ನಿರ್ಮಾಣ ಮತ್ತು ರಕ್ಷಣೆ ವಾತಾವರಣವನ್ನು ಸೃಷ್ಟಿಸುವ ಕಾರ್ಯಗಳಿಗೆ ಈ ಹಣವನ್ನು ವಿನಿಯೋಗಿಸುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap