ನವದೆಹಲಿ
ಭಾರತದಲ್ಲಿ ಬಹುದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಪಾಕ್ ಮೂಲದ ಜೈಷೆ ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರೆ ಇ ತೊಯಿಬಾ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ.
ಹೊಸದಾಗಿ ರಚನೆಯಾದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಸಾಮಾನ್ಯ ಸ್ಥಿತಿಗೆ ಮರಳದಂತೆ ತಡೆಯಲು ಮತ್ತು ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲು ಹಾಕುವುದು ಈ ದಾಳಿಯ ಉದ್ದೇಶ ಎಂದೂ ಬೇಹುಗಾರಿಕಾ ಪಡೆ ಮೂಲಗಳು ಬಹಿರಂಗಪಡಿಸಿವೆ.
ಭಾರತದಲ್ಲಿ ಉಗ್ರ ದಾಳಿ ನಡೆಸಲು ಜೆಇಎಂ ನಾಯಕರು ತರಬೇತಿ ಪಡೆದ ಉಗ್ರರೊಂದಿಗೆ ಮಾತುಕತೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಭವಲ್ ಪುರದಲ್ಲಿ ಇರುವ ಜೆಇಎಂ ಮುಖ್ಯ ಕಚೇರಿಯಲ್ಲಿ ದಾಳಿಯ ಸಂಚು ಸಿದ್ಧವಾಗಿದೆ ಎನ್ನಲಾಗಿದೆ. 7 ಆಫ್ಫನ್ ಕಮಾಂಡರ್ಗಳ ನೇತೃತ್ವದಲ್ಲಿ 20 ಉಗ್ರರು ಭಾರತದೊಳಕ್ಕೆ ನುಸುಳಲು ಗಡಿಯಾಚೆ ಸಿದ್ದವಾಗಿದ್ದಾರೆ ಎಂದೂ ಬೇಹುಗಾರಿಕಾ ಪಡೆ ಎಚ್ಚರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
