ಲಿಟ್ಲ್ ಕಿಡ್ಸ್ ಶಾಲಾವತಿಯಿಂದ ಪರಿಸರ ಉಳಿಸಿ ಜಾಥ

ಚಿತ್ರದುರ್ಗ :

    ಲಿಟ್ಸ್ ಕಿಡ್ಸ್, ಬೇಬೀಸ್ ಬ್ರೆತ್ ಎಜ್ಯಕೇಷನ್ ಟ್ರಸ್ಟ್ ಮತ್ತು ಇತರೆ ಸಂಸ್ಥೆಗಳ ಆಶ್ರಯದಲ್ಲಿ ಮಕ್ಕಳಿಗೆ ಪರಿಸರ ಉಳಿಸಿ ಜಾಥಾ ಹಾಗೂ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

    ಪರಿಸರ ಅಧಿಕಾರಿ ಬಿ.ಎಸ್. ಮುರಳಿಧರ್ ಜಾಥವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಣ್ಣ ವಯಸ್ಸಿನ ಮಕ್ಕಳಿಗೆ ಪರಿಸರ ಜಾಗ್ರತೆ ಮೂಡಿಸಿ ಅವರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಸರ್ಕಾರ ಸಹ ಉತ್ತಮ ಪರಿಸರ ಇರುವ ಶಾಲೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಇತರರಿಗೆ ಮಾದರಿಯಾಗುತ್ತಿದೆ. ಇಂತಹ ಅವಕಾಶಗಳನ್ನು ಶಾಲೆಗಳು ಬಳಸಿಕೊಂಡು ಮಕ್ಕಳಿಗೆ ಹಸಿರು ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂದರು.

     ಶ್ರೀ ಕೆ. ಕಮಾನಿ ಭೌತಶಾಸ್ತ್ರ ಪ್ರಾಧ್ಯಾಪಕರು ಮಾತನಾಡುತ್ತಾ, ಭೂಮಿಯ ವಾತಾವರಣದಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ತೇಲಾಡುತ್ತಿದ್ದು ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಮಳೆ ಹೆಚ್ಚಾಗಬಹುದು. ಸಾರ್ವಜನಿಕರು ಪ್ಲಾಸ್ಟಿಕ್ ದುರ್ಬಳಕೆಯನ್ನು ನಿಲ್ಲಿಸಬೇಕು ಎಂದರು.

    ನಿವೃತ್ತ ಡಿ.ವೈ.ಎಸ್ಪಿ. ಅಬ್ದುಲ್ ರೆಹಮಾನ್ ರವರು ಮಾತನಾಡುತ್ತಾ ಉತ್ತಮ ಶಾಲೆಗಳಿಂದ ಉತ್ತಮ ಪರಿಸರ ಪ್ರಜೆಗಳನ್ನು ನಿರ್ಮಿಸಲು ಸಾಧ್ಯ ಎಂದರು.

      ಚಿತ್ರಕಲಾ ಶ್ರೀಯುತ ಕಣ್ಮೇಶ್ ಎಸ್.ಜೆ.ಎಂ. ಚಿತ್ರಕಲಾ ವಿದ್ಯಾಲಯ ಪ್ರಾಚಾರ್ಯರು ಚಿತ್ರವನ್ನು ಬಿಡಿಸುವ ಮುಖಾಂತರ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದರು.ಡಾ. ಹೆಚ್.ಕೆ.ಎಸ್.ಸ್ವಾಮಿ ಪರಿಸರ ವಾದಿಗಳು, ಪರಿಸರದ ಬಗ್ಗೆ ಮಾದರಿಗಳ ಮೂಲಕ ಪರಿಸರ ಪ್ರೇಮವನ್ನು ತಿಳಿಯಪಡಿಸಿದರು.ಶ್ರೀ ಕೆ.ಪಿ.ಎಂ. ಗಣೇಶಯ್ಯ ರಂಗ ನಿರ್ದೇಶಕರು ಕಾರ್ಯಕ್ರಮ ನಿರೂಪಿಸಿದರು. ಕೆ.ಪಿ.ಎಂ. ಗುರುದೇವ್ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

      ಶ್ರೀ ಎಂ.ಬಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮನು ಡಿ.ಸಿ. ಕೆ.ಎಸ್.ಅಶಾ, ಕೆ.ಬಿ. ಶಶಿಧರ್ ಉಪಸ್ಥಿತರಿದ್ದರು.ಚಿತ್ರಕಲಾ ಸ್ಪರ್ಧೆಗೆ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಪೋಷಕರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಬಹುಮಾನ ವಿಜೇತರು 3-6 ವರ್ಷದೊಳಗಿನ ಪುಟಾಣಿಗಳು ಪ್ರಥಮ ನಗದು ಬಹುಮಾನ ರೂ.2000 ಹಾರ್ಧಿಕ್, ದ್ವಿತೀಯ ಬಹುಮಾನ ರೂ.1000 ಹಾಸಿನಿ.ಜಿ, 7-12 ವರ್ಷದೊಳಗಿನ ಪುಟಾಣಿಗಳು ಪ್ರಥಮ ರೂ.3000 ಕ್ರಿಶ್. ಡಿ.ಜೈನ್, ದ್ವಿತೀಯ ಬಹುಮಾನ ರೂ. 2000 ಶ್ರೇಯಸ್ ಪಿ.ಜಿ. ಮತ್ತು ಪ್ರಶಸ್ತಿ ಪತ್ರ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap