ಶಿರಾ:
ನಗರದ ದೊಡ್ಡಕೆರೆಯ ಜಲ ಸಂಗ್ರಹಾಗಾರವು ಸಂಪೂರ್ಣವಾಗಿ ನೀರಿಲ್ಲದೆ ಖಾಲಿಯಾಗಿದ್ದು ಹೇಮಾವತಿಯ ನೀರು ಕೆರೆಗೆ ಹರಿಯುವ ಮುನ್ನವೇ ಕೆರೆಯ ಏರಿಯ ಮೇಲಿನ ಅನೈರ್ಮಲ್ಯ ಕಾಪಾಡುವಂತೆ ರೆಹಮತ್ ಒತ್ತಾಯಿಸಿದ್ದಾರೆ.ನಗರದ ಮೆಹಬೂಬ್ ನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ಹೊಂದಿಕೊಂಡಿರುವ ದೊಡ್ಡ ಕೆರೆಯ ಏರಿಯ ಮೇಲೆ ಪ್ಲಾಸ್ಟಿಕ್ ಸೇರಿದಂತೆ ಕಸಕಡ್ಡಿಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕರು ಎಸೆಯುತ್ತಿದ್ದು ಇದರಿಂದ ಕೆರೆಯು ಅನೈರ್ಮಲ್ಯದಿಂದ ಕೂಡುವ ಸಾದ್ಯತೆಯೂ ಇದೆ.
ಈ ಬಗ್ಗೆ ನಗರಸಭೆಗೆ ಸಾಕಷ್ಟು ದೂರು ನಿಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ನಗರಸಭೆಯು ಏರಿಯ ಬದಿಯಲ್ಲಿನ ಅರ್ನರ್ಮಲ್ಯವನ್ನು ತೆರವುಗೊಳಿಸುವಂತೆ ರೆಹಮತ್ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








