ತುಮಕೂರು

`ಹಾಫ್ ಹೆಲ್ಮೆಟ್’ ವಿರುದ್ಧ ತುಮಕೂರು ನಗರದಲ್ಲಿ ಬುಧವಾರ ಮದ್ಯಾಹ್ನ ಟ್ರಾಫಿಕ್ ಪೊಲೀಸರು ದಿಢೀರನೆ ಕಾರ್ಯಾಚರಣೆ ನಡೆಸಿ, ಅಪಾರ ಸಂಖ್ಯೆಯಲ್ಲಿ `ಹಾï ಹೆಲ್ಮಟ್’ಗಳನ್ನು ದ್ವಿಚಕ್ರವಾಹನ ಸವಾರರಿಂದ ಪಡೆದು, ರಸ್ತೆ ಬದಿ ರಾಶಿ ಹಾಕಿದ ಪ್ರಸಂಗ ನಡೆಯಿತು.
ನಗರದ ಪ್ರಮುಖ ವೃತ್ತಗಳಲ್ಲಿ ಬುಧವಾರ ಮಧ್ಯಾಹ್ನ ದಿಢೀರನೆ ಟ್ರಾಫಿಕ್ ಪೊಲೀಸರು ಕಾರ್ಯಮಗ್ನರಾದರು. ನೂರಾರು ಸಂಖ್ಯೆಯ ದ್ವಿಚಕ್ರ ವಾಹನ ಸವಾರರು `ಹಾಫ್ ಹೆಲ್ಮೆಟ್’ ಧರಿಸಿ ಸಾಗುತ್ತಿದ್ದುದು ಕಂಡುಬಂದಿತು. ಅಂತಹವರನ್ನು ತಡೆದು ನಿಲ್ಲಿಸಿದ ಪೊಲೀಸರು, ಅವರು `Àರಿಸಿದ್ದ ಈ ಅಸುರಕ್ಷಿತ ಹೆಲ್ಮೆಟ್‍ನ್ನು ವಶಕ್ಕೆ ತೆಗೆದುಕೊಂಡು ರಸ್ತೆ ಬದಿ ರಾಶಿ ಹಾಕಿದರು. ಜೊತೆಗೆ ಇಡೀ ತಲೆಯ ಭಾಗವನ್ನು ಮುಚ್ಚುವ, ಸುರಕ್ಷಿತವಾದ ಪುಲ್ ಹೆಲ್ಮೆಟ್’ ಧರಿಸುವಂತೆ ಪ್ರತಿಯೊಬ್ಬರಿಗೂ ಸೂಚಿಸಿದರು.
ಎಸ್ಪಿ ನೀಡಿದ್ದ ಎಚ್ಚರಿಕೆ
ಇದೇ ನ.18 ರಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಂಶಿಕೃಷ್ಣ ಪತ್ರಿಕಾ ಪ್ರಕಟಣೆ ನೀಡಿ, ”ತುಮಕೂರು ನಗರದಲ್ಲಿ ಇನ್ನುಮುಂದೆ ಸುರಕ್ಷಿತವಲ್ಲದ “ಅರ್ಧ ಹೆಲ್ಮೆಟ್” ಹಾಗೂ “ಐ.ಎಸ್.ಐ. ಮಾರ್ಕ್ ಇಲ್ಲದ ಹೆಲ್ಮೆಟ್” ಧರಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಯ ಹಾಗೂ ಮೋಟಾರು ವಾಹನ ಕಾಯ್ದೆ ಅನ್ವಯ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು.
ಅದಾದ ಬಳಿಕ ನಗರದಲ್ಲಿ ಟ್ರಾಫಿಕ್ ಪೊಲೀಸರು ನಿಧಾನವಾಗಿ “ಹಾಫ್ ಹೆಲ್ಮೆಟ್” ವಿರುದ್ಧ ಕ್ರಮ ಆರಂಭಿಸಿದ್ದರು. ಈ ಮಧ್ಯ ನಗರದಲ್ಲಿ “ಹಾಫ್ ಹೆಲ್ಮೆಟ್” ಧರಿಸಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆಯಿತು. ಹೆಲ್ಮೆಟ್ ಇದ್ದೂ ಅದು ಸುರಕ್ಷಿತವಾಗಿಲ್ಲದ ಕಾರಣ ಆತ ಜೀವ ತೆರಬೇಕಾಯಿತೆನ್ನಲಾಗಿದ್ದು, ಈ ಘಟನೆ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಬುಧವಾರ ಮಧ್ಯಾಹ್ನ “ಹಾಫ್ ಹೆಲ್ಮೆಟ್” ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೆಲ್ಮೆಟ್ ಇಡೀ ತಲೆಯನ್ನು ಹಾಗೂ ಕಿವಿಯನ್ನು ಮುಚ್ಚಿರಬೇಕು. ಅಂತಹ ಹೆಲ್ಮೆಟ್‍ನ್ನು ಮಾತ್ರ ಸುರಕ್ಷತೆ ದೃಷ್ಟಿಯಿಂದ ಧರಿಸುವಂತೆ ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಸೂಚನೆ ನೀಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
