ಕಾಮುಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಫೋಕ್ಸೋ ನ್ಯಾಯಾಲಯ

ಬೆಂಗಳೂರು

     ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಫೋಕ್ಸೋ ನ್ಯಾಯಾಲಯವು ಇಬ್ಬರು ಕಾಮುಕರಿಗೆ ಜೀವಾವಧಿ ಶಿಕ್ಷೆ ಹಾಗೂ 10 ವರ್ಷಗಳ ಕಠಿಣ ಶಿಕ್ಷೆ ಆದೇಶ ಹೊರಡಿಸಿದೆ.

     ಮಾಗಡಿ ರಸ್ತೆಯ ಆರೋಪಿ ಸುನೀಲ್‍ಕುಮಾರ್ ಸಿಂಗ್ (30) ಜೀವಾವಧಿ ಶಿಕ್ಷೆಗೊಳಗಾದರೆ ಮತ್ತೊಬ್ಬ ಆರೋಪಿ ಎನ್.ಆರ್.ನಗರದ ರವಿ.ಎಂ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

      ಆರೋಪಿ ಸುನಿಲ್‍ಕುಮಾರ್ ಸಿಂಗ್ ಕಳೆದ 2017ರ ಆಗಷ್ಟ್ 27ರಂದು ಹೈಗ್ರೌಂಡ್ಸ್‍ನ ಕ್ರಸೆಂಟ್ ರಸ್ತೆಯಲ್ಲಿ ವಾಸವಾಗಿರುವ ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪಾರ್ಟ್‍ಮೆಂಟ್‍ನಲ್ಲಿ ನಿಮ್ಮ ತಾಯಿ ಇದ್ದಾರೆ. ಅವರಿಗೆ ಫೋನ್ ಕೊಟ್ಟು ಬಾ ಎಂದು ಒತ್ತಾಯಿಸಿದ್ದ.

     ಬಾಲಕಿ ಒಪ್ಪದಿದ್ದಾಗ ಆಕೆಗೆ ಚಾಕು ತೋರಿಸಿ ನೀನು ಫೋನ್ ಕೊಟ್ಟು ಬರದಿದ್ದರೆ ಚುಚ್ಚಿ ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡಿ ಆಕೆಯನ್ನು ಬಲವಂತವಾಗಿ ಟೆರೆಸ್ ಮೇಲೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ ಬಲವಂತ ಅತ್ಯಾಚಾರ ನಡೆಸಿದ್ದ.ಅಪ್ರಾಪ್ತ ಬಾಲಕಿಗೆ ಜೀವ ಬೆದರಿಕೆಯೊಡ್ಡಿದ್ದು ತನಿಖೆಯಿಂದ ದೃಢಪಟ್ಟಿರುವುದರಿಂದ ಫೋಕ್ಸೋ ಕಾಯ್ದೆಯಡಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

      ಅದೇ ರೀತಿ ವಿವೇಕ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿ ಎಂಬಾತ ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಸೆ ತೋರಿಸಿ ಖಾಲಿ ಇರುವ ವಸತಿಗೃಹಕ್ಕೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ನಡೆಸಲು ಯತ್ನಿಸಿದಾಗ ರಕ್ಷಣೆಗಾಗಿ ಕೂಗಿಕೊಂಡ ಅಪ್ರಾಪ್ತೆಗೆ ಕಪಾಳಕ್ಕೆ ಹೊಡೆದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದರಿ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ.

     50ನೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶರಾದ ಸುಶೀಲಾ ಅವರು ಈ ಎರಡು ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡಿದ್ದಾರೆ. ಫೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆ.ಆರ್. ಸುಭಾಷ್ ವಾದ ಮಂಡಿಸಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link