ಶಾಸಕರ ಖರೀದಿ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ

ಬಳ್ಳಾರಿ

        ಶಾಸಕರ ಕರಿದಿ ವಿಚಾರದಲ್ಲಿ ಬಿಜೆಪಿ ನಡೆ ಖಂಡಿಸಿ ರಾಯಲ್ ಸರ್ಕಲ್ ನ ಗಡಿಗಿ ಚನ್ನಪ್ಪ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು,

       ಮಾಜಿಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒಬ್ಬ ರಾಜ್ಯದ ಘನತೆ ಗೌರವಗಳನ್ನು ಎತ್ತಿಹಿಡಿಯುವ ವ್ಯಕ್ತಿ ಯಾಗದೆ ಶಾಸಕರ ಕರಿದಿಯಲ್ಲಿ ಮುಳುಗಿ ಆಪರೇಷನ್ ಕಮಲ ಮಾಡುವುದರಲ್ಲಿ ಮಗ್ನರಾಗಿದ್ದಾರೆ,ಆದರೆ ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ ವಾದದ್ದು ಎಂದು ಜಿಲ್ಲಾದ್ಯಕ್ಷ ಮಹಮ್ಮದ್ ರಫಿಕ್ ರವರು ಆರೋಪಿಸಿದರು,

       ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಗೋಳಿಸುವುದು ಅವರ ಕಾಯಕ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಹಂಬಲ ಬಲವಾಯಿತೇ ಹೊರತು ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ದೃಷ್ಟಿ ಅವರಲ್ಲಿ ಕಾಣದಾಗಿದೆ,ರಾಜ್ಯ ಬರದ ಛಾಯೆಯನ್ನು ರೈತರು ಎದುರಿಸುತ್ತಿದೆ, ಅದರೊಟ್ಟಿಗೆ ಭಾವನೆಗಳನ್ನು ಕೆರಳಿಸುವ ಮೂಲಕ ತಮ್ಮ ಹಿತಾಸಕ್ತಿಗಳನ್ನು ಹೊಂದಲು ಬಿಜೆಪಿ ಹವಣಿಸುತ್ತದೆ ಎಂದು ದೂರಿದರು

         ಬಿ ಜೆ ಪಿ ನ್ಯಾಯಾಂಗದ ವ್ಯವಸ್ಥೆಯನ್ನೇ ಧಿಕ್ಕರಿಸಿ ಇಂಥ ನೀಚ ಕೆಲಸ ಮಾಡಲು ಮುಂದಾದರು ಮುಂದಿನ ದಿನಗಳಲ್ಲಿ ಮತದಾರ ಪ್ರಭುಗಳು ತಕ್ಕ ಪಾಠವನ್ನು ಕಲಿಸುತ್ತಾರೆ ಮಾರ್ಮಿಕವಾಗಿ ನುಡಿದರುಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಎ ಮಾನಯ್ಯ ವೆಂಕಟೇಶ ಬಾಪೂಜಿ ನಗರ ಬಿ ಎಮ್ ಪಾಟೀಲ್ ಶಾಂತಮ್ಮ ಮಾಜಿ ಆಶ್ರಯ ಕಮಿಟಿ ಸದಸ್ಯರಾದ ಲಕ್ಷ್ಮೀದೇವಿ ಕೊಮರಮ್ಮ ಮತ್ತು ಕಾಂಗ್ರೆಸ್ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link