ರಾಮನಗರ
ರಾಮನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಎರಡನೇ ದಿನವೂ ಗದ್ದಲದಿಂದ ತುಂಬಿ ಹೋಯತು. ಇಂದು ನಡೆಯುತ್ತಿದ್ದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸಾಹಿತ್ಯಾಭಿಮಾನಿಗಳ ಎದುರಲ್ಲೇ ಜಗಳಕ್ಕೆ ಬಿದ್ದ ಘಟನೆ ವರದಿ ಯಾಗಿದೆ.
ಎರಡನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷರ ಭಾಷಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಹಿತಿ ಚಿಕ್ಕಚನ್ನಯ್ಯ ಧರ್ಮದ ಬಗ್ಗೆ ಅಧ್ಯಕ್ಷರ ನಿಲುವು ಮತ್ತು ಜಿಲ್ಲೆಗೆ ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವ ವಿಚಾರವಾಗಿ ಪ್ರಶ್ನೆ ಕೇಳಿದಾಗ, ಸಭಿಕರ ಸಾಲಿನಲ್ಲಿ ಕುಳಿತಿದ್ದ ಸಾಹಿತಿ ಎಲ್ಲೇಗೌಡ ಇದಕ್ಕೆ ಅಡ್ಡಿಪಡಿಸಿದರು. ಇದರಿಂದ ಕೆಲ ಕಾಲ ಗದ್ದಲ ಏರ್ಪಟ್ಟಿತ್ತು.
ಸಮ್ಮೇಳನಾಧ್ಯಕ್ಷರಾದ ಪ್ರೋ.ಎಂ.ಶಿವನಂಜಯ್ಯನವರ ಎದುರೇ ನಡೆದ ಮಾತಿನ ಚಕಮಕಿಯಿಂದ ಕಸಿವಿಸಿಗೊಂಡು ಉತ್ತರ ಕೊಡಲು ಮುಂದಾದ ಸಮ್ಮೇಳನದ ಅಧ್ಯಕ್ಷರಾದ ಪ್ರೋ. ಶಿವನಂಜಯ್ಯನವರಿಗೆ ಸಾಹಿತಿ ಎಲ್ಲೇಗೌಡ ಅವಾಜ್ ಹಾಕಿದರು. ಇದರಿಂದ ಕೆರಳಿದ ಸಮಾರಂಭ ಆಯೋಜಕರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








