ಹಗರಿಬೊಮ್ಮನಹಳ್ಳಿ
ಇದೀಗ ಬೇಸಿಗೆ ಕಾಲ ಆರಂಭವಾಗುತ್ತಿದೆ, ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆ ದೋರಬಾರದೆಂದು, ಸಾರ್ವಜನಿಕರ ನೀರಿನ ದಾಹ ನೀಗಿಸಲು ಕುಡಿಯುವ ನೀರಿನ ಅರವಟಿಗೆಗಳನ್ನು ನಿರ್ಮಿಸುತ್ತಿರುವ ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯವೆಂದು ರಾಜ್ಯ ತಾಂಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಎಸ್.ಭೀಮಾನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ರಾಮನಗರ ಶಾಲೆಯ ಬಳಿ ತಕ್ಷಶಿಲಾ ಹೆಲ್ತ್ ಆಂಡ್ ಸ್ಪೊಟ್ರ್ಸ್ ಕ್ಲಬ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ಮತ್ತು ಟ್ರಡಿಷನಲ್ ಶೋಟಕಾನ್ ಕರಾಟೆ ಅಕಾಡೆಮಿಯು ಸಂಯುಕ್ತವಾಗಿ ನಿರ್ಮಿಸಿರುವ ನೀರಿನ ಅರವಟಿಗೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಕುಡಿಯಲು ನೀರನ್ನು ಪೂರೈಕೆಮಾಡುವ ಸಂಘ ಸಂಸ್ಥೆಗಳ ಕಾರ್ಯ ವೈಖರಿಯು ಇನ್ನಷ್ಟು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಯು.ಬಾಬುವಲಿ, ಜೋಗಿ ಹನುಮಂತಪ್ಪ, ತಕ್ಷಶಿಲಾ ಕ್ಲಬ್‍ನ ಅಧ್ಯಕ್ಷ ಪರಮೇಶ್ವರಯ್ಯ ಸೊಪ್ಪಿಮಠ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭರಮಜ್ಜ ಗದ್ದಿಕೇರಿ, ಶೋಟಕಾನ್ ಕರಾಟೆ ಅಕಾಡೆಮಿಯ ಎಂ.ಸುಭಾಷ್ ಚಂದ್ರ, ಗುಂಡ್ರು ಹನುಮಂತಪ್ಪ, ಅರಿಸಿಕೇರಿ ಹನುಮಂತಪ್ಪ, ಕೆ.ಎಂ.ನವೀನ, ಬಾದಾಮಿ ಕರಿಬಸವರಾಜ, ಕನ್ನಿಹಳ್ಳಿ ಚಂದ್ರಶೇಖರ್, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಜೆ. ಉಮೇಶ ಹಾಗು ಕ್ಲಬ್‍ನ ಶಿವಶಂಕರಯ್ಯ. ಗಣೇಶ ರಾಥೋಡ್ . ಅತೀಫ್. ನಾಗರಾಜ. ಇಸ್ತ್ರಿ ಸೋಮಣ್ಣ, ಮಾರೇಶ, ಪಕ್ಕೀರಪ್ಪ, ವಾಸೀಂ ರಾಜ, ನಸುರುಲ್ಲಾ ಮತ್ತಿತರರಿದ್ದರು.