ಬಳ್ಳಾರಿ
ಜಿಲ್ಲಾಡಳಿತ ವತಿಯಿಂದ ಸನಾತನ ಭಾರತದ ಸಂಸ್ಕೃತಿ ಚಿಲುಮೆ, ಅದ್ವೈತ ವೇದಾಂತದ ಕರ್ತೃ ಆದಿ ಶಂಕರಚಾರ್ಯರ ಜಯಂತಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.ಲೋಕಸಭಾ ಚುನಾವಣಾ-2019 ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಂಕರಚಾರ್ಯರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಶಂಕರಚಾರ್ಯರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಶಂಕರ ಮಠದ ಅಧ್ಯಕ್ಷ ಗೋವಿಂದ ಭಟ್, ಧರ್ಮಕರ್ತ ರವಿಶಾಸ್ತ್ರಿ, ಹಾಗೂ ಇತರೆ ಗಣ್ಯವ್ಯಕ್ತಿಗಳು ಸೇರಿದಂತೆ ಸಮಾಜದ ಮುಖಂಡರು ಇದ್ದರು