ಸಿದ್ದರಾಮರ ಅಂದಿನ ಯೋಜನೆಗಳು ಇಂದುಗೂ ಪ್ರಸ್ತುತ : ಸುರೇಶ್

ತಿಪಟೂರು

      ಕರ್ಮಯೋಗಿ ಸಿದ್ದರಾಮರು 12 ನೇ ಶತಮಾನದಲ್ಲಿಯೇ ಸಾಮಾಜಿಕವಾಗಿ ಆರ್ಥಿಕವಾಗಿ ಜನರು ಏಳಿಗೆ ಹೊಂದುವಂತಹ ಅನೇಕ ಕೆಲಸಗಳನ್ನು ಮಾಡಿದರು. ಅದರಲ್ಲಿ ಇವರು ಪ್ರತಿ ಹಳ್ಳಿಗಳಿಗೆ ನಿರ್ಮಿಸಿದ ಕೆರೆ ಕಟ್ಟೆಗಳ ನಿದರ್ಶನ ಇಂದಿನ ಜನರನ್ನು ನಾಚಿಸುವಂತಿದೆ ಎಂದು ತಾ.ಪಂ.ಅಧ್ಯಕ್ಷ ಎಂ.ಎನ್ ಸುರೇಶ್ ತಿಳಿಸಿದರು.

       ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶ್ರೀ ಶಿವಯೋಗೀಶ್ವರ ಸಿದ್ದರಾಮೇಶ್ವರ ಜಯಂತಿ ಹಾಗೂ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದರ ಮೂಲಕ ಆಚರಿಸಿ ಮಾತನಾಡಿದ ಅವರು, ಇಂದು ನಾವಿಲ್ಲಿ ನೋಡುತ್ತಿರುವ ರಾಶಿಪೂಜೆಯನ್ನು ನಗರಗಳಲ್ಲಿ ನೋಡಬೇಕಾಗುತ್ತಿದೆ. ಹಳ್ಳಿಗಳಲ್ಲಿ ಇದ್ದ ಈ ಸಂಪ್ರದಾಯವು ಇಂದಿನ ಯಾಂತ್ರಿಕ ಕೃಷಿಯಿಂದ ಅಂದರೆ ರಾಗಿ, ಬತ್ತ ಮುಂತಾದ ಬೆಳೆಗಳನ್ನು ಬೆಳೆದು ಅವಗಳನ್ನು ಕಣದಲ್ಲೇ ಸ್ವಚ್ಛಗೊಳಿಸಿ ರಾಶಿಪೂಜೆಯನ್ನು ಮಾಡುತ್ತಿದ್ದುದು ಸಂಪ್ರದಾಯದಂತೆ ನಡೆಯುತ್ತಿತ್ತು. ಆದರೆ ಹೊಲ ಗದ್ದೆಗಳಲ್ಲಿಯೇ ಸ್ವಚ್ಛಗೊಳಿಸಿ ಅಲ್ಲಿಂದಲೇ ಸೀದ ಮಾರುಕಟ್ಟೆಗೆ ಬೆಳೆಗಳು ತಲುಪುತ್ತಿದ್ದು ಇಂದು ಕಣದಲ್ಲಿ ರಾಶಿ ಪೂಜೆ ಆಗಲಿ ಕಣವಾಗಲಿ ಕಾಣುತ್ತಿಲ್ಲ. ಇದು ಹೀಗೆಯೇ ಆದರೆ ಮಕ್ಕಳು ಸುಗ್ಗಿ ಪೂಜೆಯನ್ನು ಛಾಯಾಚಿತ್ರಗಳಲ್ಲಿ ನೋಡಬೇಕಾಗುತ್ತದೆ ಎಂದು ವಿಷಾದಿಸಿದರು.

         ತಹಸೀಲ್ದಾರ್ ಡಾ.ವಿ.ಮಂಜುನಾಥ್ ಮಾತನಾಡಿ ಕಾಯಕ ಯೋಗಿ ಸಿದ್ದರಾಮರು ಯಾವುದೇ ಜಾತಿ ಭೇದ ಮಾಡದೆ ಅಂದು ಸಾಮಾಜಿಕವಾಗಿ ಜನರ ಅಭಿವೃದ್ಧಿಗೆ ಬೇಕಾದಂತಹ ಕೆಲಸಗಳನ್ನು ಮಾಡಿಕೊಂಡು ಬಂದಂತವರು ಅವರ ಕೆಲಸಗಳು ಇಂದಿನ ಜನರಿಗೂ ದಾರಿದೀಪವಾಗಿದ್ದು ಇಂತಹ ಮಹನೀಯರ ಕೆಲಸಗಳನ್ನು ನಾವು ರೂಢಿಸಿಕೊಳ್ಳಬೇಕು, ಇವರ ಹುಟ್ಟಿದ ದಿನವೆ ರೈತರ ಸಂಭ್ರಮದ ಸುಗ್ಗಿ ಹಬ್ಬ ಮಾಡುತ್ತಿರುವುದು ನಾವು ಸಿದ್ದರಾಮರಿಗೆ ಕೊಡುತ್ತಿರುವ ಗೌರವವಾಗಿದೆ. ಇಂದು ನಮ್ಮ ಕಚೇರಿಯಲ್ಲಿ ಸಿಬ್ಬಂದಿಗಳ ಜೊತೆ ಹಾಗೂ ರೈತರುಗಳ ಜೊತೆ ಹಬ್ಬ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.ಉಪನ್ಯಾಸಕರಾದ ರೇಣುಕಯ್ಯ ಸಿದ್ದರಾಮರ ಜೀವನ ಚರಿತ್ರೆ, ತತ್ವಾದರ್ಶಗಳ ಬಗ್ಗೆ ನೆರೆದ ಸಭಿಕರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಬಿ.ಇ.ಓ ಮಂಗಳಗೌರಮ್ಮ, ಸಮಾಜದ ಜಿಲ್ಲಾ ಮುಖಂಡ ಶಶಿಧರ್ ಐಯ್ಯನಬಾವಿ, ಯೋಗೀಶ್ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link