ಬೆಂಗಳೂರು
ಪತ್ನಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಮೃತದೇಹವನ್ನು ಆಂಧ್ರದ ನೆಲ್ಲೂರಿಗೆ ಸಾಗಿಸಿದ್ದ ಖತರ್ನಾಕ್ ಸಾಫ್ಟ್‍ವೇರ್ ಇಂಜಿನಿಯರೊಬ್ಬನನ್ನು ನೆಲ್ಲೂರು ಪೊಲೀಸರು ಬಂಧಿಸಿ ಹೆಚ್‍ಎಎಲ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೆಚ್‍ಎಎಲ್‍ನ ಶ್ರೀನಿವಾಸ ರೆಡ್ಡಿ (32) ಬಂಧಿತ ಆರೋಪಿಯಾಗಿದ್ದಾನೆ,ಎಚ್‍ಎಎಲ್ ಬಳಿ ಮಾ.9 ರಂದು ಪತ್ನಿ ವೆಂಗಮ್ಮ(20) ಅವರನ್ನು ಶಂಕಿಸಿ ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿಯನ್ನು ಶ್ರೀನಿವಾಸ ಕೊಲೆಗೈದಿದ್ದನು ಪತಿ ಪತ್ನಿ ಇಬ್ಬರು ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ಪತ್ನಿ ಸದಾ ಯಾರೊಂದಿಗೋ ಮೊಬೈಲ್‍ನಲ್ಲಿ ಚಾಟ್ ಮಾಡುತ್ತಿದ್ದಳು. ಕಾಲ್‍ನಲ್ಲಿ ಬ್ಯುಸಿ ಇರುತ್ತಿದ್ದಳು. ಬೇಕಂತಲೇ ಮಕ್ಕಳು ಬೇಡ ಎಂದು ಹೇಳುತ್ತಿದ್ದಳು. ಅದಕ್ಕೆ ನಾನು ಪತ್ನಿಯನ್ನು ಕೊಂದೆ ಎಂದು ಆರೋಪಿ ಹೇಳಿದ್ದಾನೆ.
ಮಾ.9ರಂದು ಆರೋಪಿ ಜ್ಯೂಸ್‍ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತ್ನಿಗೆ ಕುಡಿಸಿದ್ದು ಆಕೆ ನಿದ್ರೆಗೆ ಜಾರಿದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದೆನು ನಂತರ ಈ ವಿಷಯ ಯಾರಿಗೂ ತಿಳಿಬಾರದು ಎಂದು ವಾಟರ್ ಹೀಟರ್‍ನಿಂದ ವಿದ್ಯುತ್ ತಗುಲಿ ಹೊಡೆದು ಮೃತಪಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದೇನು. ಅಲ್ಲದೆ ಯಾರಿಗೂ ತಿಳಿಯದಂತೆ ಆರೋಪಿ ನೆಲ್ಲೂರಿಗೆ ಶವ ಸಾಗಿಸಿದ್ದಾಗ ಅಲ್ಲಿನ ಪೊಲೀಸರು ಬೆಂಗಳೂರು ಎಚ್‍ಎಎಲ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಆತನ ವಿರುದ್ಧ ಬೆಂಗಳೂರು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
