`ವಾರ್ಡ್ ಸಮಿತಿ’ ರಚನೆಗೆ ಸದಸ್ಯರ ವಿರೋಧ..!

ತುಮಕೂರು
     “ಸರ್ಕಾರದ ನಿಯಮಾನುಸಾರವಾಗಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 35 ವಾರ್ಡ್ಗಳಲ್ಲೂ “ವಾರ್ಡ್ ಸಮಿತಿ” ರಚಿಸಲು ಪಾಲಿಕೆಯ 35 ಸದಸ್ಯರುಗಳೂ ವಿರೋಧಿಸಿದ್ದಾರೆಯೇ? ಆ ಮೂಲಕ ಸರ್ಕಾರದ ನಿಯಮವನ್ನೇ ಕಡೆಗಣಿಸಿದ್ದಾರೆಯೇ?”
      ತುಮಕೂರು ಮಹಾನಗರ ಪಾಲಿಕೆಯಲ್ಲಿ  ಮೇಯರ್ ಲಲಿತಾ ರವೀಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಪಾಲಿಕೆಯ ಸಾಮಾನ್ಯ ಸಭೇಯ `ನಡವಳಿ ಪ್ರತಿ’ (ಪ್ರೊಸೀಡಿಂಗ್ ಕಾಪಿ) ಇದೀಗ ಎಲ್ಲ ಸದಸ್ಯರುಗಳಿಗೂ ವಿತರಿಸಲ್ಪಟ್ಟಿದ್ದು, ಅದರಲ್ಲಿ ಕಂದಾಯ ಶಾಖೆಯಿಂದ ಮಂಡಿಸಲ್ಪಟ್ಟಿರುವ ಈ ವಿಷಯದಲ್ಲಿ ಕೈಗೊಂಡಿರುವ ತೀರ್ಮಾನವು ಇಂತಹುದೊಂದು ವಿವಾದಾಸ್ಪದ ಸಂಗತಿಯನ್ನು ಬಹಿರಂಗಗೊಳಿಸಿದ್ದು, ಸಾರ್ವಜನಿಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.
      “ಮಹಾನಗರ ಪಾಲಿಕೆಯ ಅಧಿನಿಯಮ 1976 ರ ಕಲಂ 13 ಎಚ್ ರಂತೆ ವಾರ್ಡ್ ಕಮಿಟಿ ರಚಿಸುವ ಬಗ್ಗೆ” ಎಂಬ ವಿಷಯವನ್ನು (ಸಂಖ್ಯೆ: 14) ಅಜೆಂಡಾದಲ್ಲಿ ಮಂಡಿಸಲಾಗಿತ್ತು. ಇದಕ್ಕೆ ಪಾಲಿಕೆಯ ಆಡಳಿತವು ಟಿಪ್ಪಣಿಯನ್ನು ಮಂಡಿಸುತ್ತ “ವಿಷಯದಲ್ಲಿ ವಿವರಿಸಿರುವಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ನಿಯಮಾನುಸಾರ ವಾರ್ಡ್ ಕಮಿಟಿ ರಚಿಸಿ ವರದಿ ಸಲ್ಲಿಸುವಂತೆ ಸರ್ಕಾರದ ಪತ್ರ ಸಂಖ್ಯೆ : ನಅಇ-18/ ಎಂ.ಎನ್.ಇ/ 2019, ದಿನಾಂಕ: 19-06-2019 ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ರವರು ಸೂಚಿಸಿರುತ್ತಾರೆ.
       ಅದರಂತೆ ವಾರ್ಡ್ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಿ ವಾರ್ಡ್ ಕಮಿಟಿ ಪಟ್ಟಿಯನ್ನು ಅನುಮೋದಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಮೋದನೆಗಾಗಿ ಮಂಡಿಸಿದೆ” ಎಂದು ತಿಳಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ತೀರ್ಮಾನದಲ್ಲಿ -“ಸಭೆಯಲ್ಲಿ ಸದರಿ ವಿಷಯದ ಬಗ್ಗೆ ಚರ್ಚಿಸಿ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲೂ ವಾರ್ಡ್ ಕಮಿಟಿ ರಚಿಸಲು ಸದಸ್ಯರು ಒಪ್ಪಿಗೆ ಸೂಚಿಸಿರುವುದಿಲ್ಲ” ಎಂದು ದಾಖಲಿಸಲಾಗಿದೆ. ಇದೇ ಈಗ ವಿವಾದಕ್ಕೆ ಆಸ್ಪದವಾಗಿದೆ. 
       ನಿಯಮಾನುಸಾರ ವಾರ್ಡ್ ಸಮಿತಿಗಳನ್ನು ರಚಿಸಬೇಕೆಂದು ನಗರದ ಪ್ರಜ್ಞಾವಂತ ನಾಗರಿಕರು ಹಲವು ವರ್ಷಗಳಿಂದಲೂ ತುಮಕೂರು ನಗರಪಾಲಿಕೆಯನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಪ್ರತಿ ವರ್ಷ  ನಡೆಯುವ ಬಜೆಟ್ ಪೂರ್ವಭಾವಿ ಸಭೆಗಳಲ್ಲೂ ನಾಗರಿಕರಿಂದ ಈ ಬಗ್ಗೆ ಬೇಡಿಕೆ ಇದ್ದೆ ಇರುತ್ತದೆ. ಇದಕ್ಕೆ ಪಾಲಿಕೆಯಿಂದ ಭರವಸೆ ದೊರಕುತ್ತಲೇ ಇದೆ. ಅಲ್ಲದೆ ಪಾಲಿಕೆಯ ಬಜೆಟ್‌ನಲ್ಲೂ ವಾರ್ಡ್ ಸಮಿತಿ ರಚನೆಗೆ ಇಂತಿಷ್ಟು ಮೊತ್ತವನ್ನು ತೆಗೆದಿರಿಸಲಾಗುತ್ತಿದೆ. ಆದರೂ ಈವರೆಗೆ ವಾರ್ಡ್ ಸಮಿತಿ ಆಗಿಲ್ಲ. ಪ್ರತಿ ವಾರ್ಡ್ನಲ್ಲೂ ಆಯಾ ವಾರ್ಡ್ ವ್ಯಾಪ್ತಿಯ ನಾಗರಿಕರನ್ನು ಒಳಗೊಂಡAತೆ ವಾರ್ಡ್ ಸಮಿತಿ ರಚಿಸಿ, ಆಯಾ ವಾರ್ಡ್ನ ಕಾಮಗಾರಿಗಳ ಬಗ್ಗೆ ಆ ಸಭೆಯಲ್ಲೇ ಚರ್ಚಿಸಬೇಕು ಎಂಬಿತ್ಯಾದಿ ನಿಯಮಾವಳಿಗಳು ಇವೆ ಎಂಬುದನ್ನು ನಾಗರಿಕರು ನೆನಪಿಸಿಕೊಳ್ಳಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap