ವಿನಾಯಕ ಸ್ಟೋರ್ ಪ್ರಕರಣ : ಆರೋಪಿ ಬಂಧನ

ಬೆಂಗಳೂರು:

      ಹೊಸಕೋಟೆಯ ತಗ್ಗಲಿ ಹೊಸಹಳ್ಳಿಯ ವಿನಾಯಕ ಪ್ರಾವಿಜೆನ್ ಸ್ಟೋರ್ ಅಂಗಡಿಯ ಗೋಡೆ ಕೊರೆದು ಒಳ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

       ಕಟ್ಟಿಗೇನಹಳ್ಳಿಯ ಸೈಯದ್ ವಾಸಿಂ ಅಲಿಯಾಸ್ ವಾಸಿಂ (20) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 40 ಸಾವಿರ ನಗದು, ಸಿಸಿ ಟಿವಿ, ಡಿವಿಆರ್ ಸೆಟ್‍ನ್ನು ವಶಪಡಿಸಿಕೊಳ್ಳಲಾಗಿದೆ.

        ಆರೋಪಿಯು ಕಳೆದ ಫೆ. 3 ರಂದು ಮಧ್ಯರಾತ್ರಿ ವಿನಾಯಕ ಪ್ರಾವಿಜನ್ ಸ್ಟೋರ್ ಅಂಗಡಿಯ ಗೋಡೆ ಕೊರೆದು ಒಳ ನುಗ್ಗಿ 35 ಸಾವಿರ ನಗದು, ಸಿಸಿ ಟಿವಿ, ಡಿವಿಆರ್, ಇತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಹೊಸಕೋಟೆ ಪೊಲೀಸರು ಖಚಿತ ಮಾಹಿತಿಯಾಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link