ಮೈತ್ರಿ ಅಭ್ಯರ್ಥಿಗಳಿಗೆ ಮತ ಹಾಕಲು ಫರ್ಮಾನು ಹೊರಡಿಸಿದ ದಿಲ್ಲಿಯ ಜಾಮಿಯಾ ಮಸೀದಿ

ಬೆಂಗಳೂರು

         ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರಮೋದಿ ನೇತೃತ್ವದ ಸರ್ಕಾರಅಧಿಕಾರಕ್ಕೆ ಬಂದರೆ ದುಸ್ಥಿರ ದಿನಗಳನ್ನು ಎದುರಿಸ ಬೇಕಾಗುತ್ತದೆ.ಹೀಗಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಕರ್ನಾಟಕದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟದ ಕ್ಯಾಂಡಿಡೇಟುಗಳಿಗೆ ಕಡ್ಡಾಯವಾಗಿ ಮತ ನೀಡುವಂತೆ ದಿಲ್ಲಿಯಜಾಮಿಯಾ ಮಸೀದಿ ಮುಸ್ಲಿಂ ಸಮುದಾಯಕ್ಕೆ ಫರ್ಮಾನು ಹೊರಡಿಸಿರುವ ಅಂಶ ಬೆಳಕಿಗೆ ಬಂದಿದೆ.

        ಕೆಲ ದಿನಗಳ ಹಿಂದೆ ದಿಲ್ಲಿಯಜಾಮಿಯಾ ಮಸೀದಿಯ ಬುಕಾರಿಅವರುರಹಸ್ಯ ಸಂದೇಶವೊಂದನ್ನು ರವಾನಿಸಿದ್ದು ಈ ಸಂದೇಶ ಇದೀಗ ರಾಜ್ಯಾದ್ಯಂತಇರುವ ಮುಸ್ಲಿಂ ಸಮುದಾಯಕ್ಕೆತಲುಪಿದೆ.ಕಳೆದ ವರ್ಷ ನಡೆದ ವಿಧಾನಸಭಾಚುನಾವಣೆಯಲ್ಲಿ ಬಿಜೆಪಿ ವಿರುದ್ಧಕಾಂಗ್ರೆಸ್‍ಗೆ ಮತ ನೀಡಬೇಕುಎಂದು ನೀಡಿದ ಸೂಚನೆಯನ್ನು ಸಮುದಾಯ ಪಾಲಿಸಿದ ಪರಿಣಾಮವಾಗಿಇವತ್ತುಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದಿಲ್ಲ.

        ಒಂದು ವೇಳೆ ಮುಸ್ಲಿಂ ಮತಗಳು ಒಡೆದು ಹೋಗಿದ್ದರೆ ಮತ್ತುಕಾಂಗ್ರೆಸ್ ಪಕ್ಷಎಂಬತ್ತು ಸೀಟುಗಳನ್ನು ಗೆಲ್ಲದಿದ್ದರೆ ನಿಶ್ಚಿತವಾಗಿ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತಿತ್ತುಎಂದುಅದು ನೆನಪು ಮಾಡಿಕೊಟ್ಟಿದೆ.

        ನಾವು ಕೊಟ್ಟ ಮತಗಳಿಂದ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯದೆಇರಬಹುದು.ಆದರೆ ನಾವು ಮತಕೊಡದೆಇದ್ದರೆಕರ್ನಾಟಕದಲ್ಲಿ ಬಿಜೆಪಿ ವಿರೋಧಿ ಶಕ್ತಿಗಳು ಅಧಿಕಾರ ಹಿಡಿಯುತ್ತಿರಲಿಲ್ಲ.

       ಹೀಗಾಗಿ ಹಳೆಯ ಅಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.ಯಾವ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ.ಬಿಜೆಪಿ ಹಿಂದುತ್ವವನ್ನು ಪ್ರತಿಪಾದಿಸುವ ಶಕ್ತಿ ಎಂಬ ಕಾರಣಕ್ಕಾಗಿ ನಾವು ವಿರೋಧಿಸಬೇಕಿಲ್ಲ.ಆದರೆಅದರ ಆಳದ ಅಜೆಂಡಾ ಬೇರೆಇದೆ.

        ಈ ಅಜೆಂಡಾವನ್ನುಗುರುತಿಸದೆಇದ್ದರೆ ಹಿಂದೂಗಳೂ ಗಂಡಾಂತರಅನುಭವಿಸುತ್ತಾರೆ.ಒಂದು ಸಮುದಾಯದಗುಲಾಮಗಿರಿಗೆ ಒಳಪಡುತ್ತಾರೆ.ಹೀಗಾಗಿ ಮುಸ್ಲಿಮರು ಕರ್ನಾಟಕದಲ್ಲಿ ಬಿಜೆಪಿ ವಿರೋಧಿ ಶಕ್ತಿಗಳಿಗೆ ಮತ ಚಲಾಯಿಸುವಾಗ ಈ ಅಂಶವನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು.

          ನಮ್ಮ ಮತ ಕೇವಲ ಮುಸ್ಲಿಮರ ಹಿತರಕ್ಷಿಸುವ ಸಲುವಾಗಿ ಅಲ್ಲ,ಜತೆಗೆ ಹಿಂದೂ ಸಹೋದರರ ಹಿತರಕ್ಷಿಸುವ ಸಲುವಾಗಿಯೂಇರುತ್ತದೆಎಂಬುದನ್ನು ಸಾಬೀತುಪಡಿಸಬೇಕುಎಂದುಅದು ವಿಶೇಷ ಅಂಶಗಳನ್ನು ಪ್ರಸ್ತಾಪಿಸಿದೆ.ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಈ ಬಾರಿಜಾಮೀಯ ಮಸೀದಿಯ ಬುಕಾರಿಅವರು ವಿಶೇಷವಾಗಿ ಉಲ್ಲೇಖಿಸಿರುವ ಅಂಶ ಮುಸ್ಲಿಮರಿಗಷ್ಟೇ ಅಲ್ಲ,ಹಿಂದೂಗಳ ದೃಷ್ಟಿಯಿಂದಲೂಗಮನಾರ್ಹವಾಗಿದೆ ಎಂದಿವೆ.

          ನಾವು ಬಿಜೆಪಿಯ ಹಿಂದುತ್ವದಅಜೆಂಡಾವನ್ನುಎಚ್ಚರಿಕೆಯಿಂದ ಗಮನಿಸಬೇಕಾದ ಕಾಲ ಬಂದಿದೆ.ಹೀಗಾಗಿ ಅದನ್ನುಗುರುತಿಸಲು ನಾವು ವಿಫಲರಾಗಬಾರದು.ಯಾಕೆಂದರೆ ಬಿಜೆಪಿಯಆರ್ಥಿಕ ನೀತಿಗಳಿಂದ ಮುಸ್ಲಿಮರು ಮಾತ್ರವಲ್ಲ,ಎಲ್ಲ ಸಮುದಾಯಗಳ ಬಡ,ಕೆಳ ಮಧ್ಯಮ ವರ್ಗ ಸಂಕಟ ಅನುಭವಿಸಿದೆ.ಅನುಭವಿಸುತ್ತಿದೆ.ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದಂತೆಯೇ ಈ ಬಾರಿ ಬಿಜೆಪಿ ವಿರೋಧಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಿ.ಅದೇರೀತಿಕಡ್ಡಾಯವಾಗಿ ಮತಚಲಾವಣೆ ಮಾಡಿಎಂದು ಬುಕಾರಿ ಸಂದೇಶ ನೀಡಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link