ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ ..!

ಬೆಂಗಳೂರು

         ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಭಾನುವಾರ ಸೈಕಲ್ ಜಾಥಾ ನಡೆಸಲಾಯಿತು.ನಗರದ ಕಂಠೀರವ ಕೀಡಾಂಗಣದಿಂದ ಆರಂಭವಾದ ಸೈಕಲ್ ಜಾಥಾಗೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಚಾಲನೆ ನೀಡಿದರು.

         ಮತದಾರರ ಜಾಗೃತಿಯ ಫಲಕಗಳೊಂದಿಗೆ ಒಟ್ಟಾಗಿ ಸೈಕಲ್ ಸವಾರರು ಸಂಚರಿಸಿದ್ದು ಆಕರ್ಷಣೀಯವಾಗಿತ್ತು. ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಸುಮಾರು 30 ಕಿ.ಮೀ ಸೈಕಲ್ ಜಾಥಾ ಕ್ರಮಿಸಿದ್ದು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.

        ಈಗಾಗಲೇ ಚುನಾವಣಾ ಆಯೋಗ ವಿವಿಧ ಸಂಘಸಂಸ್ಥೆಗಳು ಮತದಾನದ ಪ್ರಮಾಣ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿವೆ.ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣ, ಬಸ್ ಟಿಕೆಟ್‍ನಲ್ಲೂ ಕೂಡ ಮತದಾನದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ ಹೋಟೆಲ್ ಸೇರಿದಂತೆ ಕೆಲವು ಸಂಘಸಂಸ್ಥೆಗಳು ಕೂಡ ಮತದಾನದ ಮಹತ್ವದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುತ್ತಿವೆ.

        ಕಲಾವಿದರಿಂದ ಚಿತ್ರಬಿಡಿಸುವಿಕೆ, ಬೀದಿ ನಾಟಕ, ಮೆರವಣಿಗೆ, ಘೋಷ ವಾಕ್ಯಗಳು ಸೇರಿದಂತೆ ನಾನಾ ರೀತಿಯಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಉತ್ತೇಜಿಸಲಾಗುತ್ತಿದ್ದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸೈಕಲ್ ಸವಾರಿ ಜಾಥಾ ನಡೆಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link