ತುಮಕೂರು: ಮೋದಿ ಆಗಮನ ಹಿನ್ನೆಲೆಯಲ್ಲಿ ವಾಹನ ಮಾರ್ಗ ಬದಲು

ತುಮಕೂರು
     ತುಮಕೂರು ನಗರಕ್ಕೆ ಜ.2 ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ವಿವಿಧ ದಿಕ್ಕುಗಳಿಂದ ಆಗಮಿಸಲಿರುವ ವಾಹನಗಳ ಸಂಚಾರದ ಮಾರ್ಗಗಳು ಬದಲಾಗಲಿದೆ ಹಾಗೂ ವಾಹನ ನಿಲುಗಡೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ಕೋನ ವಂಶಿಕೃಷ್ಣ ಮಾಹಿತಿ ನೀಡಿದ್ದು,
ವಿವರ ಹೀಗಿದೆ:-
ಶಿರಾ-ಮಧುಗಿರಿ ಮಾರ್ಗದಲ್ಲಿ
    ತುಮಕೂರು ನಗರದೊಳಗೆ ಶಿರಾ ಮತ್ತು ಮಧುಗಿರಿ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್‍ಗಳು ತುಮಕೂರು ಶಿರಾಗೇಟ್-ಕೋಡಿ ವೃತ್ತದಿಂದ ಬಂದು ಸಮಾರಂಭಕ್ಕೆ ಹೋಗುವ ಸಾರ್ವಜನಿಕರನ್ನು ಅಮಾನಿಕೆರೆ ರಸ್ತೆಯಲ್ಲಿ ಇಳಿಸಿ, ಖಾಲಿ ಬಸ್‍ಗಳು ಕೋತಿ ತೋಪು ರಸ್ತೆ, ಹನುಮಂತಪುರ ರಸ್ತೆ ಮೂಲಕ ಎನ್‍ಹೆಚ್-48 ರಸ್ತೆಗೆ ಹೋಗಿ ಅಂತರಸನಹಳ್ಳಿ ಮಾರ್ಕೆಟ್ ಹತ್ತಿರ ಕೆಎಸ್‍ಆರ್‍ಟಿಸಿ ಡಿಪೋ ಮತ್ತು ಕ್ರಿಶ್ಚಿಯನ್ ಕಾಲೇಜು ಆವರಣದಲ್ಲಿ ವಾಹನಗಳ ನಿಲುಗಡೆ ಮಾಡಬೇಕು. ಶಿರಾ ಮತ್ತು ಮಧುಗಿರಿ ಕಡೆಗೆ ವಾಪಸ್ ಹೋಗುವಾಗ ಅದೇ ಬಸ್‍ಗಳು ಅದೇ ಮಾರ್ಗವಾಗಿ ಎನ್‍ಹೆಚ್-48, ಹನುಮಂತರಪುರ ಅಂಡರ್‍ಪಾಸ್, ಬೆಳಗುಂಬ ರಸ್ತೆ, ಕೋತಿತೋಪು ರಸ್ತೆ ಮುಖಾಂತರ ಅಮಾನಿಕೆರೆ ರಸ್ತೆಗೆ ಬಂದು ಜನರನ್ನು ಹತ್ತಿಸಿಕೊಂಡು ಬಂದು ಕೋಡಿ ಸರ್ಕಲ್ ಮೂಲಕ ಶಿರಾಗೇಟ್‍ಗೆ ಬಂದು ಶಿರಾಕಡೆಗೆ ಮತ್ತು ಮಧುಗಿರಿ ಕಡೆಗೆ ತೆರಳಬೇಕು.
ಬೆಂಗಳೂರು ಮಾರ್ಗದಲ್ಲಿ
    ಬೆಂಗಳೂರು ಕಡೆಯಿಂದ ಸಮಾರಂಭಕ್ಕೆ ಬರುವ ಕೆಎಸ್‍ಆರ್‍ಟಿಸಿ ಬಸ್‍ಗಳು ಎನ್‍ಹೆಚ್-48 ರಸ್ತೆ ಮೂಲಕ ಹನುಮಂತಪುರ ಫ್ಲೈಓವರ್‍ನಿಂದ ಕೆಳಗೆ ಬಂದು ಬೆಳಗುಂಬ ರಸ್ತೆ ಮೂಲಕ ಎನ್.ಆರ್ ಕಾಲೋನಿ ಪಕ್ಕದ ರಸ್ತೆ ಮೂಲಕ ಅಮಾನಿಕೆರೆ ರಸ್ತೆಗೆ ಬಂದು ಜನರನ್ನು ಇಳಿಸಿ, ಅಲ್ಲಿಂದ ಕೋಡಿ ಸರ್ಕಲ್, ಶಿರಾಗೇಟ್ ಮೂಲಕ ಕ್ರಿಶ್ಚಿಯನ್ ಕಾಲೇಜು ಆವರಣ ಮತ್ತು ಟೂಡಾ ಲೇಔಟ್‍ನ ಮಲ್ಲಪ್ಪ ರಸ್ತೆ (80 ಅಡಿ ರಸ್ತೆ)ಯಲ್ಲಿ ವಾಹನಗಳನ್ನು ನಿಲುಡಗೆ ಮಾಡಬೇಕು. ನಂತರ ಬೆಂಗಳೂರು ಕಡೆಗೆ ವಾಪಸ್ ಹೋಗುವಾಗ ಬಸ್‍ಗಳು ಅಮಾನಿಕೆರೆ ರಸ್ತೆಯಲ್ಲಿ ಎಸ್.ಎಸ್ ಸರ್ಕಲ್ ಕಡೆ ಅಭಿಮುಖವಾಗಿ ನಿಲ್ಲಿಸಿ, ನಂತರ ಎಸ್.ಎಸ್ ಸರ್ಕಲ್, ಬಟವಾಡಿ ಸರ್ಕಲ್, ಎಪಿಎಂಸಿ ಮುಂದಿನಿಂದ ಬೆಂಗಳೂರು ಕಡೆ ತೆರಳಬೇಕು.
ಕುಣಿಗಲ್ ಮಾರ್ಗದಲ್ಲಿ
     ಕುಣಿಗಲ್ ಕಡೆಯಿಂದ ಬರುವ ಕೆಎಸ್‍ಆರ್‍ಟಿಸಿ ಬಸ್‍ಗಳು ಕುಣಿಗಲ್ ಜಂಕ್ಷನ್ ಮೂಲಕ ಲಕ್ಕಪ್ಪ ಸರ್ಕಲ್‍ಗೆ ಬಂದು ಬಿ.ಹೆಚ್ ರಸ್ತೆ ಮೂಲಕ ಬಿಜಿಎಸ್ ಸರ್ಕಲ್‍ಗೆ ಬಂದು ಅಶೋಕ ರಸ್ತೆಯಲ್ಲಿ ನಿಲ್ಲಿಸಿ, ಜನರನ್ನು ಇಳಿಸಿ ಖಾಲಿ ಬಸ್‍ಗಳು ಹೆಲ್ತ್ ಕ್ಯಾಂಟೀನ್ ರಸ್ತೆ, ಜೆ.ಸಿ ರಸ್ತೆ, ಲಕ್ಕಪ್ಪ ಸರ್ಕಲ್, ಕುಣಿಗಲ್ ರಸ್ತೆ ಮೂಲಕ ಕುಣಿಗಲ್ ಜಂಕ್ಷನ್‍ನಿಂದ ಎಡಕ್ಕೆ ತಿರುಗಿ ಗುಬ್ಬಿ ರಿಂಗ್ ರಸ್ತೆಯಲ್ಲಿ ಶೆಟ್ಟಿಹಳ್ಳಿ ಜಂಕ್ಷನ್‍ವರೆಗೆ ರಸ್ತೆಯ ಎಡಬದಿಯಲ್ಲಿ ವಾಹನಗಳನ್ನು ನಿಲುಗಡೆಗೆ ಮಾಡಬೇಕು. ಕುಣಿಗಲ್ ಕಡೆಗೆ ವಾಪಸ್ ಹೋಗುವ ಬಸ್ಸುಗಳು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತಿದ್ದು, ಜನರನ್ನು ಹತ್ತಿಸಿಕೊಂಡು ಅಶೋಕ ರಸ್ತೆಗೆ ಬಂದು ಬಿಜಿಎಸ್ ಸರ್ಕಲ್‍ನಿಂದ ಲಕ್ಕಪ್ಪ ಸರ್ಕಲ್‍ಗೆ ಹೋಗಿ ಎಡಕ್ಕೆ ತಿರುಗಿ ಕುಣಿಗಲ್ ಜಂಕ್ಷನ್ ಕಡೆಯಿಂದ ಕುಣಿಗಲ್ ಕಡೆ ಹೋಗುತ್ತವೆ. 
ಗುಬ್ಬಿ ಮಾರ್ಗದಲ್ಲಿ
    ಗುಬ್ಬಿ ಕಡೆಯಿಂದ ಬರುವ ಕೆಎಸ್‍ಆರ್‍ಟಿಸಿ ಬಸ್‍ಗಳು ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ಮೂಲಕ ಗುಬ್ಬಿಗೇಟ್, ಬಿ.ಜಿಪಾಳ್ಯ ಸರ್ಕಲ್ ಮೂಲಕ,ಲಕ್ಕಪ್ಪ ಸರ್ಕಲ್ ಮೂಲಕ ಬಿಜಿಎಸ್ ಸರ್ಕಲ್‍ಗೆ ಬಂದು ಅಶೋಕ ರಸ್ತೆಯಲ್ಲಿ ನಿಲ್ಲಿಸಿ ಜನರನ್ನು ಇಳಿಸಿ ಖಾಲಿ ಬಸ್‍ಗಳು,  ಹೆಲ್ತ್ ಕ್ಯಾಂಟೀನ್ ರಸ್ತೆ, ಜೆ.ಸಿ ರಸ್ತೆ, ಲಕ್ಕಪ್ಪ ಸರ್ಕಲ್, ಕುಣಿಗಲ್ ರಸ್ತೆ ಮೂಲಕ ಕುಣಿಗಲ್ ಜಂಕ್ಷನ್‍ನಿಂದ ಎಡಕ್ಕೆ ತಿರುಗಿ ರಸ್ತೆಯಲ್ಲಿ ಶೆಟ್ಟಿಹಳ್ಳಿ ಜಂಕ್ಷನ್‍ವರೆಗೆ ರಸ್ತೆಯ ಎಡಬದಿಯಲ್ಲಿ ವಾಹನಗಳ ನಿಲುಗಡೆ ಮಾಡಬೇಕು. ಗುಬ್ಬಿ ಕಡೆ ವಾಪಸ್ ಹೋಗುವ ಬಸ್ಸುಗಳು ಗುಬ್ಬಿ ರಿಂಗ್ ರಸ್ತೆಯಿಂದ ಕುಣಿಗಲ್ ರಸ್ತೆ, ಲಕ್ಕಪ್ಪ ಸರ್ಕಲ್, ಅಶೋಕ ರಸ್ತೆಯಲ್ಲಿ ಬಂದು ಹಳೆ ಡಿಪೋದಲ್ಲಿ ನಿಲುಗಡೆ ಮಾಡಿ ಅಲ್ಲಿಂದ ಜನರನ್ನು ಹತ್ತಿಸಿಕೊಂಡು ಜೆಸಿ ರಸ್ತೆ ಮೂಲಕ ಲಕ್ಕಪ್ಪ ಸರ್ಕಲ್‍ನಿಂದ ರಿಂಗ್ ರೋಡ್ ಜಂಕ್ಷನ್‍ಗೆ ಹೋಗಿ ಮುಂದೆ ತೆರಳಬೇಕು. 
ಖಾಸಗಿ ಬಸ್‍ಗಳ ಸಂಚಾರ
     ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್ ಕಡೆಯಿಂದ ಬರುವ ಖಾಸಗಿ ಬಸ್‍ಗಳು ಲಕ್ಕಪ್ಪ ಸರ್ಕಲ್‍ಗೆ ಬಂದು ನಂತರ ಬಿಜಿಎಸ್ ಸರ್ಕಲ್, ಅಶೋಕ ರಸ್ತೆ ಮೂಲಕ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಜನರನ್ನು ಇಳಿಸಿ ಅಲ್ಲಿಯೇ ವಾಹನ ನಿಲುಗಡೆ ಮಾಡಿ ಸಮಾರಂಭ ಮುಗಿದ ನಂತರ ಅದೇ ಸ್ಥಳದಲ್ಲಿಯೇ ಜನರನ್ನು ಹತ್ತಿಸಿಕೊಂಡು ಅಶೋಕ ರಸೆ,  ಬಿ.ಎಚ್.ರಸ್ತೆ, ಲಕ್ಕಪ್ಪ ಸರ್ಕಲ್‍ಗೆ ಬಂದು ತೆರಳಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap