ಮಂಡ್ಯ:
ಯಾರಾದರು ಕೊಲೆ ಅಥವಾ ಕಳ್ಳತನ ಮಾಡಿ ಪೊಲೀಸರ ಅಥಿತಿಯಾಗುತ್ತಾರೆ ಾದರೆ ಮಂಡ್ಯದಲ್ಲಿ ಇಬ್ಬರು ಹುಡುಗರು ಮಾತ್ರ ವಿಚಿತ್ರ ಕೇಸಿನಲ್ಲಿ ಬುಕ್ ಆಗಿದ್ದಾರೆ.
ಮುತ್ತು ಕೊಡುವ ಚಾಲೆಂಜ್ ಮಾಡಿ ಯುವಕರು ಪೊಲೀಸರ ಅತಿಥಿಯಾಗಿರುವ ಘಟನೆ ಬುಧವಾರ ಸಂಜೆ ಮಂಡ್ಯದ ಗ್ರಾಮವೊಂದರಲ್ಲಿ ನಡೆದಿದೆ.
ಪ್ರಮೋದ್ ಹಾಗೂ ವೆಂಕಟೇಶ್ ನಡುವೆ ಗ್ರಾಮದ 10 ವರ್ಷದ ಬಾಲಕಿಗೆ ಮುತ್ತು ಕೊಡುವ ಚಾಲೆಂಜ್ ನಡೆದಿತ್ತು. ಅಲ್ಲದೇ ಬಾಲಕಿ ಶಾಲೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಯುವಕರು ಆಕೆಗೆ ಮುತ್ತು ನೀಡಲು ಮುಂದಾದಾಗ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಬಾಲಕಿಯ ಚೀರಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರಮೋದ್ ಸ್ಥಳದಿಂದ ಪರಾರಿ ಆಗಿದ್ದು, ವೆಂಕಟೇಶ್ನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.ಈ ಬಗ್ಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








