ಹರಿಹರ :
ದೇಶದ ಸಂಸ್ಕತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳಸುವ ಶಕ್ತಿ ಯುವ ಸಮೂಹಕ್ಕೆ ಇದೆ ಎಂದು ಎಸ್‍ಜೆಪಿವಿವಿ ವಿದ್ಯಾಪೀಠದ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಅಭಿಪ್ರಾಯ ಪಟ್ಟರು.
ನಗರದ ಎಸ್‍ಜೆವಿಪಿ ಕಾಲೇಜಿನಲ್ಲಿ ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ನಡೆದ ಸಂಗ್ಯಾ ಬಾಳ್ಯಾ ನಾಟಕದ ವಿಶೇಷ ಉಪನ್ಯಾಸ ಹಾಗೂ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ, ಕೀರ್ತನೆ, ಭಜನೆ, ಕಲೆ, ಸಾಹಿತ್ಯ, ನಾಟಕಗಳು ದೇಶದ ಸಂಸ್ಕತಿಗಳಲ್ಲಿ ತಮ್ಮದೇಆದ ಪಾತ್ರ ವಹಿಸಿವೆ. ಯುವಕರಲ್ಲಿ ಮೌಲ್ಯತುಂಬಿ ಬದುಕುವ ಕಲೆ ಜ್ಞಾನ ಬೆಳಸುತ್ತವೆ. ಅದರೆಆದುನಿಕಜಗತ್ತಿನ ಅನಗತ್ಯಗಳಿಗೆ ಬಲಿಯಾಗುತ್ತಿರುವ ಯುವಜನತೆ ಅನಗತ್ಯಗಳನ್ನು ಉಪೇಕ್ಷಿಸಿ ವಿವಿಧ ಕಲೆಗಳೆಡೆ ಆಸಕ್ತಿ ಬೆಳಸಿಕೊಂಡಲ್ಲಿ ಸಭ್ಯ ಸಮಾಜ ಕಟ್ಟಬಹುದು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಚಳ್ಳಕೇರಿಯ ಸಂಶೋಧಕ ಡಾ.ಎನ್.ಬಿ. ವಿರೂಪಾಕ್ಷ ಕರ್ನಾಟಕದ ಜನಪದ ರಂಗಭೂಮಿಯಲ್ಲಿ ಯಕ್ಷಗಾನ ಹಾಗೂ ಬಯಲಾಟ ಮುಖ್ಯಪಾತ್ರ ವಹಿಸಿವೆ. ಯಕ್ಷಗಾನ ಮೊದಲ ಪಾಯವಾದರೆ ಬಯಲಾಟ ಪಡುವಲ ಪಾಯ ಎಂದೇ ಗುರುತಿಸುತ್ತಾರೆ ಎಂದರು.
ಪ್ರಸ್ತುತ ಸಂಗ್ಯಾ ಬಾಳ್ಯ ಅತೀ ಹೆಚ್ಚು ಪ್ರದರ್ಶನ ಕಂಡ ನಾಟಕವಾಗಿದ್ದು, ಇತಿಹಾಸದಲ್ಲಿ ಇದ್ದ ಸಾಮಾಜಿಕ ಕಟ್ಟುಪಾಡುಗಳು, ಆಕರ್ಷಣೆ, ಧನ ಕನಕಗಳ ವ್ಯಾಮೋಹ, ಕುಟಿಲತೆಗಳ ಬಗ್ಗೆ ಬೆಳಕು ಚಲ್ಲುತ್ತದೆ. ನಾಟಕದಲ್ಲಿ ತಮಟೆಗಿಂತ ಸ್ವಲ್ಪ ಸಣ್ಣಗಿರುವಡಪ್ಪು ಎಂಬ ಚರ್ಮವಾದ್ಯವೂತನ್ನ ನಿನಾದದಿಂದ ಪಾತ್ರಗಳಲ್ಲಿ ಒಂದಾಗುವದೇ ಇಲ್ಲಿ ವಿಶೇಷವಾಗಿದೆ ಎಂದರು.
ಬಯಲಾಟ ಅಕಾಡೆಮಿ ಅಧ್ಯಕ್ಷಡಾ. ಶ್ರೀರಾಮ ಇಟ್ಟಣ್ಣ ನವರ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಲಹೆಗಾರ ಪ್ರೊ.ಸಿ.ವಿ. ಪಾಟೀಲ್, ಎ.ಬಿ. ರಾಮಚಂದ್ರಪ್ಪ, ಕಾಲೇಜಿನ ಪ್ರಾಂಶುಪಾಲ ಕೆ.ಎಂ. ರುದ್ರಮುನಿಸ್ವಾಮಿ, ಅಕಾಡಮಿ .ಎಸ್.ಎಂ.ಮುತ್ತಯ್ಯ ಶಿವಪುತ್ರಪ್ಪ ಕಾಲ್ತಿಪ್ಪಿ ಹಾಗೂ ಇತರರು ಭಾಗವಹಿಸಿದ್ದರು.
