ಅಡಕೆ ಕಳ್ಳರನ್ನು ಹಿಡಿದ ಯುವಕರು

0
30

ದಾವಣಗೆರೆ :

       ಚನ್ನಗಿರಿ ತಾಲೂಕಿನ ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ (ಫಾರಂ) ತೋಟದಲ್ಲಿ ಒಂದು ಲೋಡು ಅಡಿಕೆ ತುಂಬಿಕೊಂಡು ಅನುಮಾನಸ್ಪದವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್‍ನ್ನು ಕವಳಿತಾಂಡ ಗ್ರಾಮದ ಯುವಕರು ಹಿಡಿದಿರುವ ಘಟನೆ ಅಡಿಕೆ ನಡೆದಿದೆ.

      ಕೊಯ್ಲು ಮಾಡಿದ ಅಡಕೆಯನ್ನು ಸಂಶೋಧನಾ ಕೇಂದ್ರ ಕಣಕ್ಕೆ ತರುವ ಬದಲು ಬೇರೆಕಡೆ ಸಾಗಿಸುತ್ತಿದ್ದ ಟ್ರಾಕ್ಟರ್‍ನ್ನು ಸ್ಥಳೀಯ ಯುವಕರು ನಿಲ್ಲಿಸಿ ವಿಚಾರಿಸಿದಾಗ ಕಳವು ಮಾಡಿಕೊಂಡು ಅಡಕೆಯನ್ನು ಸಾಗಿಸುತ್ತಿದ್ದುದು ಗೊತ್ತಾಗಿದೆ. ಈ ವೇಳೆ ವಿಚಾರಿಸಿದಾಗ ಫಾರಂನ ಕ್ಷೇತ್ರಾಧೀಕ್ಷಕರು ತೆಗೆದುಕೊಂಡು ಹೋಗಲು ಸೂಚಿಸಿದ್ದರು ಎಂಬುದಾಗಿ ಟ್ರಾಕ್ಟರ್ ಚಾಲಕ ಸಮೀಪದ ಎಸ್.ಆರ್.ಕ್ಯಾಪಿನ ಶ್ರೀನಿವಾಸ ತಿಳಿಸಿದ್ದಾನೆ ಎಂದು ಯುವಕರು ತಿಳಿಸಿದ್ದಾರೆ.

       ಒಂದು ಟ್ರಾಕ್ಟರ್ ಲೋಡ್ ಅಡಕೆಯು ಸುಮಾರು 1 ರಿಂದ 1.5 ಲಕ್ಷ ಮೌಲ್ಯದ ಅಡಕೆಯನ್ನು ಎಸ್ ಆರ್ ಕ್ಯಾಂಪಿನ ಶ್ರೀನಿವಾಸ್ ಅವರು ಟ್ರಾಕ್ಟರ್‍ನಲ್ಲಿ ಲೋಡ್ ಮಾಡಿಕೊಂಡು ಸಂಶೋಧನಾ ಕೇಂದ್ರದ ಕಣಕ್ಕೆ ಪ್ರವೇಶಿಸುವ ಗೇಟನ್ನು ದಾಟಿ ಬೆಳಲಗೆರೆಕಡೆಗೆ ಸುಮಾರು ಎರಡು ಕಿ.ಮೀ. ದೂರ ಸಾಗುತ್ತಿದ್ದಾಗ ಕಶೆಟ್ಟಿಹಳ್ಳಿ ಸಮೀಪ ಅಡಕೆ ತುಂಬಿದ ಟ್ರಾಕ್ಟರ್ ಸಿಕ್ಕುಬಿದ್ದಿದೆ.

      ಮುಂಜಾನೆಯಿಂದ ತೋಟದಲ್ಲಿ ಕೊಯ್ಲು ಮಾಡುತ್ತಿದ್ದ ಅಡಕೆಯನ್ನು ಕಣಕ್ಕೆ ಸಾಗಿಸುತ್ತಿದ್ದ ಟ್ರಾಕ್ಟರ್ ಸಂಜೆ ಸುಮಾರು 6.30ರ ವೇಳೆಗೆ ಅಡಕೆ ತುಂಬಿಕೊಂಡು ಕಣಕ್ಕೆ ಹೋಗುವ ಬದಲು ಕೇಂದ್ರವನ್ನು ದಾಟಿ ಬೆಳಲಗೆರೆ ಕಡೆಗೆ ಹೊರಟಿದ್ದು, ಹೊಲದಲ್ಲಿದ್ದ ಶಶಿಕುಮಾರ್, ದಿಲೀಪ್ ರಾಮ್‍ಸಿಂಗ್ ಅವರು ಟ್ರಾಕ್ಟರ್‍ನ್ನು ತಡೆದಿದ್ದಾರೆ. ಆಗ ಚಾಲಕ ಶ್ರೀನಿವಾಸ್ ಬೇರೆ ಕಡೆಗೆ ಸಾಗಿಸುವಂತೆ ಕ್ಷೇತ್ರಾಧೀಕ್ಷಕರು ಸೂಚಿಸಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಯುವಕರು ಕ್ಷೇತ್ರಾಧೀಕ್ಷಕ ಮಾರುತೇಶ್ ಅವರಿಗೆ ಕರೆಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಟಡಕೆ ತುಂಬಿದ್ದ ಟ್ರಾಕ್ಟರನ್ನು ಕೇಂದ್ರದ ಕಣಕ್ಕೆ ವಾಪಸ್ ತಂದು ಹಾಕಲಾಯಿತು ಎಂದು ಕವಳಿತಾಂಡದ ಯುವಕ ಶಶಿಕುಮಾರ್,ರಾಮಸಿಂಗ್, ನಾಗರಾಜ್, ದಿಲೀಪ್ ಮತ್ತತಿರರು ತಿಳಿಸಿದ್ದಾರೆ.

       13 ಎಕರೆ ಅಡಕೆ ತೋಟದ ಈ ಬಾರಿಯ ಅಡಕೆ ಕೇಣಿಯನ್ನು 26 ಲಕ್ಷಕ್ಕೆ ಟೆಂಡರ್ ನೀಡಲಾಗಿತ್ತು. ಆದರೆ ಟೆಂಡರ್‍ದಾರ ಹಣವನ್ನು ಪಾವತಿಸದೆ ಅಡಕೆಯನ್ನು ಕೀಳದೆ ಇದ್ದುದರಿಂದ ಸಂಶೋಧನಾ ಕೇಂದ್ರದ ವತಿಯಿಂದ ಅಡಕೆ ಕೀಳಿಸಿ ಎಪಿಎಂಸಿ ಮಾರುಕಟ್ಟೆ ದರದಂತೆ ತೂಕದ ಲೆಕ್ಕದಲ್ಲಿ ಅಡಕೆ ಮಾರಾಟ ಮಾಡಲಾಗುತ್ತಿತ್ತು. ಮುಂಜಾನೆಯಿಂದ ಕಣಕ್ಕೆ ಅಡಕೆ ಸಾಗಿಸುತ್ತಿದ್ದ ಟ್ರಾಕ್ಟರ್ ಸಂಜೆ ಹೊತ್ತಿನಲ್ಲಿ ಕಣದ ಬದಲು ಮುಂದೆ ಹೋಗಿದ್ದುದರಿಂದ ಯುವಕರು ಅನುಮಾನದಿಂದ ಟ್ರಾಕ್ಟರನ್ನು ತಡೆದುಕಣಕ್ಕೆ ತರಿಸಿ ಕೆಡವಿಸಿದ್ದಾರೆ. ಅದನ್ನು ಪರಿಶೀಲಿಸಿ ಕೃಷಿ ಮತ್ತು ತೋಗಾರಿಕೆ ವಿಶ್ವವಿದ್ಯಾಲಯಕ್ಕೆ ವರದಿ ಮಾಡಲಾಗಿದೆ ಎಂದು ಜಾಗೃತ ಅಧಿಕಾರಿ ಡಾ.ಆನಂದಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here