ಬೆಂಗಳೂರು
ನೆರೆಯ ಆಂಧ್ರಪ್ರದೇಶದ ಕರ್ನೂಲ್‍ನಿಂದ ಕಡಿಮೆ ಬೆಲೆಗೆ ಗಾಂಜಾವನ್ನು ತಂದು ಚಿಕ್ಕ ಪಾಕೆಟ್‍ಗಳಾಗಿ ಕಟ್ಟಿ ಬೈಕ್‍ನಲ್ಲಿ ಸಂಚರಿಸುತ್ತಾ ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಮೈಕೋಲೇ ಔಟ್ ಪೆಲೀಸರು ಬಂಧಿಸಿ, 12 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಕೋಲೇ ಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕರ್ನೂಲ್‍ನ ವಿಷ್ಣುವರ್ಧನ (23), ರಾಜೇಶ್ (22), ಹಾಗೂ ಗುರಪ್ಪನಪಾಳ್ಯದ ಜುನೇದ್ ಅಹ್ಮದ್ (24)ನನ್ನು ಬಂಧಿಸಿ 12 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ
ಆರೋಪಿಗಳಲ್ಲಿ ರಾಜೇಶ್ ಹಾಗೂ ವಿಷ್ಣುವರ್ಧನ ಕರ್ನೂಲ್‍ನಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ ಮತ್ತೊಬ್ಬ ಆರೋಪಿ ಜುನೇದ್ ನೊಂದಿಗೆ ಬಿಟಿಎಂ ಲೇಔಟ್, ಬನ್ನೇರುಘಟ್ಟ, ಮತ್ತಿತರರ ಕಡೆಗಳಲ್ಲಿ ಓಡಾಡುತ್ತಾ ಸಾಫ್ಟ್‍ವೇರ್ ಕಂಪನಿಯ ಉದ್ಯೋಗಿಗಳು ವೃತ್ತಿ ಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಮೋಜು ಮಾಡುತ್ತಿದ್ದರು.
ಗಿರಾಕಿಯೊಬ್ಬ ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮೈಕೋ ಲೇಔಟ್ ಪೆಲೀಸ್ ಇನ್ಸ್‍ಪೆಕ್ಟರ್ ರವಿಪ್ರಕಾಶ್, ಮತ್ತವರ ಸಿಬ್ಬಂದಿ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದೆ ಆರೋಪಿಗಳು ಮೋಜಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದು ಹಲವು ದಿನಗಳಿಂದ ಈ ದಂಧೆ ನಡೆಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
