ಪ್ರೀತಿಯಿದ್ದರೆ ವಿಷಕುಡಿ ಎಂದ ಪ್ರೀಯಕರ

ಬೆಂಗಳೂರು

        ನನ್ನ ಮೇಲೆ ನೈಜ ಪ್ರೀತಿಯಿದ್ದರೆ ವಿಷಕುಡಿ ಎಂದು ಪ್ರೀಯಕರ ನೀಡಿದ್ದ ಸವಾಲು ಸ್ವೀಕರಿಸಿ ವಿಷ ಕುಡಿದಿದ್ದ ಪ್ರೇಯಸಿಯೊಬ್ಬಳು ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ನಗರದ ಹೊರವಲಯದ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

        ಆವಲಹಳ್ಳಿಯ ಕಿತ್ತಿಗನೂರುವಿನ ದಿವ್ಯ (19)ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೇಯಸಿಯನ್ನು ಗುರುತಿಸಲಾಗಿದೆ ,ಆತ್ಮಹತ್ಯೆಗೆ ಸವಾಲು ಹಾಕಿದ ಪ್ರಿಯಕರ ಹರೀಶ್(20) ಪರಾರಿಯಾಗಿದ್ದು ಆತನ ಪತ್ತೆಗಾಗಿ ಆವಲಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

         ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದ ಪ್ರಿಯಕರ ಹರೀಶ್ ಮತ್ತು ದಿವ್ಯ ಇಬ್ಬರು ಕಳೆದ ಮಂಗಳವಾರ ಭೇಟಿಯಾಗಿ ಮಾತನಾಡುವ ವೇಳೆ ನನ್ನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ವಿಷ ಕುಡಿ ಎಂದು ಹರೀಶ್ ಸವಾಲು ಹಾಕಿದ್ದಾನೆ.ಕೂಡಲೇ ಸವಾಲ್ ಸ್ವೀಕರಿಸಿದ ದಿವ್ಯ ವಿಷ ಕುಡಿದು ಮನೆಗೆ ತೆರಳಿದ್ದಾಳೆ.

         ಮನೆಗೆ ಹೋದ ಬಳಿಕ ದಿವ್ಯ ವಾಂತಿ ಮಾಡುತ್ತಾ ಅಸ್ವಸ್ಥಳಾಗಿದ್ದು ತಕ್ಷಣ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ .ಒಂದು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಿವ್ಯ ಚಿಕಿತ್ಸೆ ಫಲಕಾರಿಯಾಗದೇ ದಿವ್ಯ ಮೃತಪಟ್ಟಿದ್ದಾಳೆ.ಪ್ರಿಯಕರ ಹರೀಶ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿವ್ಯ ಸಾವನ್ನಪ್ಪಿದ ವಿಷಯ ತಿಳಿದು ಆರೋಪಿ ಹರೀಶ್ ಪರಾರಿಯಾಗಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link