ಗೋಶಾಲೆಗೆ 4 ಲೋಡು ಮೇವು ವಿತರಿಸಿದ ಜಪಾನಂದಜಿ

ಮಿಡಿಗೇಶಿ:

     ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿ ಗರಣಿ ಗ್ರಾ.ಪಂ.ಗೆ ಸೇರಿದ ಚನ್ನಮಲ್ಲನಹಳ್ಳಿ ಗ್ರಾಮದ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಕಳೆದ 25 ವರ್ಷಗಳಿಂದ ಸುರಭಿ ಗೋಶಾಲೆಯ ಗೋವುಗಳಿಗೆ ಮೇವು ಒದಗಿಸುವ ಕಾರ್ಯಕ್ರಮವನ್ನು ಆಶ್ರಮದ ಮಧುಸೂಧನ್ ಅವರು ನಡೆಸುತ್ತಾ ಬರುತ್ತಿದ್ದಾರೆ.

      ಜೂ.3 ರಂದು ಪಾವಗಡದ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದಜಿ ಸ್ವಾಮಿಯವರು ಸುರಭಿ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು ಚನ್ನಮಲ್ಲನಹಳ್ಳಿ ಗ್ರಾಮದ ಸುರಭಿ ಗೋಶಾಲೆಗೆ ಇನ್ಫೋಸಿಸ್ ಫೌಂಡೇಶನ್ ಹಾಗೂ ಆಶ್ರಮದ ವತಿಯಿಂದ ಆಂದ್ರ ರಾಜ್ಯದಿಂದ ಸುಮಾರು 50 ಸಾವಿರ ರೂ.ಗಳ ವೆಚ್ಚದಲ್ಲಿ ಖರೀದಿಸಿ ತಂದಿರುವ ಭತ್ತದ ನಾಲ್ಕು ಲೋಡ್ ಮೇವನ್ನು ಜಪಾನಂದಾಜೀ ಸ್ವಾಮಿಗಳವರು ತರಿಸಿ ಗೋಶಾಲೆಗೆ ಹಸ್ತಾಂತರಿಸಿದರು.

      ನಂತರ ಮಾತನಾಡಿದ ಶ್ರೀಗಳು ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬರ ಯೋಚನೆ ಮಾನವರ ಮೇಲೆ ಕಾಣಬರುತ್ತಿದ್ದು ಪ್ರಾಣಿಗಳ ಬಗ್ಗೆ ಯಾರಿಗೂ ಅಷ್ಠಾಗಿ ಕಾಳಜಿ ಕಾಣಬರುತ್ತಿಲ್ಲ. ಮೂಕ ಪ್ರಾಣಿಗಳತ್ತ ಗಮನ ಹರಿಸಿ ಎಲ್ಲಾ ಗೋಶಾಲೆಗಳಿಗೂ ಮೇವು ನೀಡಲಾಗುತ್ತಿದೆ. ನಮ್ಮ ದೇಶದ ಸಂಸ್ಕøತಿ, ಪರಂಪರೆ ಉಳಿಸಲು ಗೋಶಾಲೆಗಳು ಅಗತ್ಯವಾಗಿದೆ ಎಂದ ಅವರು, ರಾಸುಗಳಿಗೆ ಮೊದಲಿಗೆ ಬೆಲ್ಲ ತಿನ್ನಿಸಿದ ಬಳಿಕ ಮೇವು ಹಾಕಿದರು.

      ನೀರನ್ನು ಕೊಡುವುದು ಪುಣ್ಯದ ಕೆಲಸವಾಗಿದೆ. ಈ ಗೋಶಾಲೆಯಲ್ಲಿ 4500 ರಾಸುಗಳಿಗೆ ಅನುಕೂಲಕರ ಕಲ್ಪಿಸಲಾಗಿದ್ದು ಇದೀಗ 130 ರಾಸುಗಳಿವೆ. ಅವುಗಳಲ್ಲಿ 95 ರಾಸುಗಳು ಹತ್ತು ವರ್ಷ ವಯಸ್ಸಿಗಿಂತ ಮೇಲ್ಪಟ್ಟವುಗಳಾಗಿರುತ್ತವೆ. ಸದರಿ ಗೋಶಾಲೆಗೆ ಮುಂದಿನ ದಿನಗಳಲ್ಲೂ ಮೇವನ್ನು ಒದಗಿಸುವ ಭರವಸೆ ಸ್ವಾಮಿಜಿಯವರು ನೀಡಿದರು.

     ತಾಲ್ಲೂಕಿನ ತಹಶೀಲ್ದಾರ್ ರವಿ.ವೈ ಮಾತನಾಡಿ ಇಂದು ಮೊದಲಿಗೆ ಗೋಶಾಲೆಗೆ ಭೇಟಿ ನೀಡಲಾಗಿದ್ದು, ಸದರಿ ಗೋಶಾಲೆಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯ ಒದಗಿಸುವುದಾಗಿ ಪಶು ಇಲಾಖೆಯ ಸಹಾಯಕ ನಿರ್ದೇಶಕರು, ಪಶು ವೈದ್ಯರಿಂದ ಸುರಭಿ ಗೋಶಾಲೆಯ ಸ್ಥಿತಿಗತಿ ಪ್ರತಿ ತಿಂಗಳು ವರದಿ ಪರಿಶೀಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಗೋವಿಂದರಾಜು, ಪಾವಗಡ ರಾಮಕೃಷ್ಣಾಶ್ರಮದ ಸಂಚಾಲಕರಾದ ವೇಣುಗೋಪಾಲ ರೆಡ್ಡಿ, ಲೋಕೇಶ್ ರಾವ್ ಮಧುಗಿರಿ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಟಿ.ಪ್ರಸನ್ನಕುಮಾರ್, ಉಪಾಧ್ಯಕ್ಷ ಮಿಡಿಗೇಶಿ ಅಂಜನಪ್ಪ, ಶಶಿಕುಮಾರ್ ಮುಖಂಡರಾದ ಡಾ|| ಶಿವಕುಮಾರ್ ಹೊಸಕೆರೆ, ಶಿಕ್ಷಕರ ಸಂಘದ ನಿರ್ದೇಶಕ ನರಸೇಗೌಡ, ಗ್ರಾಮಲೆಕ್ಕಿಗ ಜಗದೀಶ್ ಹಾಗೂ ಚನ್ನಮಲ್ಲನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

 ಮನವಿ:

      ಸದರಿ ಗೋಶಾಲೆಗೆ 130 ದನಕರು, ಇತ್ಯಾದಿ ರಾಸುಗಳಿಗೆ ದಿನವೊಂದಕ್ಕೆ ಎರಡೂವರೆ ಟನ್ ಮೇವು ಬೇಕಾಗಿರುತ್ತದೆ. ಸದರಿ ಮೇವನ್ನು ಈ ಭಾಗದ ರೈತಾಪಿ ವರ್ಗದವರಿಂದ ಖರೀದಿಗೆ ತಂದು ರಾಸುಗಳಿಗೆ ಉಣಬಡಿಸಲಾಗುತ್ತಿದೆ. ಸದರಿ ಗೋಶಾಲೆಯಿರುವ ಬಳಿ ರಾಸುಗಳಿಗೆ ಕುಡಿಯಲು ನೀರಿನ ತೊಂದರೆ ಇರುವುದಿಲ್ಲ. ಇಲ್ಲಿ ರಾಷ್ಟ್ರೀಯ ಗವ್ಯ ಉತ್ಪಾದನಾ ಕೇಂದ್ರವಿದ್ದು 54 ಉತ್ಪನ್ನಗಳನ್ನು ತಯಾರಿಸಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆಯೆಂದು ತಿಳಿದು ಬಂದಿದೆ. ಯಾವುದೇ ಭಾಗದ ರೈತರುಗಳವರು ತಮಗೆ ಸಾಕಲು ಸಾಧ್ಯವಾಗದೆ ಇದ್ದಲ್ಲಿ ಕಸಾಯಿ ಖಾನೆಗೆ ಮಾರುವ ಬದಲು ಸುರಭಿ ಗೋಶಾಲೆಗೆ ಗೋವುಗಳನ್ನು ಸೇರಿಸುವಂತೆ ಸುರಭಿ ಗೋಶಾಲೆಯ ವ್ಯವಸ್ಥಾಪಕ ಮನವಿ ಮಾಡಿಕೊಂಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link