ನಿಜವಾಗುತ್ತಿದೆ ವೀರಬ್ರಹ್ಮೇಂದ್ರ ಸ್ವಾಮಿಯವರ ಕಾಲಜ್ಞಾನ…..!

ನಂದ್ಯಾಲ

    ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬೇವಿನ ಮರದಿಂದ ಹಾಲು ಧುಮ್ಮಿಕ್ಕಿ ಹರಿಯುತಿದೆ. ಅದನ್ನು ಗಮನಿಸಿದ ಸ್ಥಳೀಯರು ಈ ವಿಚಿತ್ರವನ್ನು ನೋಡಲು ಮುಗಿಬಿದ್ದಿದ್ದಾರೆ. ಬೇವಿನ ಮರದಿಂದ ಹಾಲು ಹರಿಯುವುದು ಇದೇ ಮೊದಲೇನಲ್ಲ.. ಇಂತಹ ಘಟನೆಗಳು ಹಲವೆಡೆ ಆಗಾಗ ನಡೆಯುತ್ತಲೇ ಇರುತ್ತವೆ.. ನೆಟ್ಟಿಗರು ಇಂತಹ ಹಲವಾರು ಪ್ರಸಂಗಗಳನ್ನು ನೋಡಿದ್ದಾರೆ. ಆದರೆ ಈ ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 12 ಅಡಿ ಎತ್ತರದ ಬೇವಿನ ಮರದಿಂದ ಜಲಪಾತದಂತೆ ಹಾಲು ಹರಿಯುತ್ತಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

    ಆತ್ಮಕೂರು ಮಂಡಲದ ವೆಂಕಟಾಪುರ ಗ್ರಾಮದ ಮೂಗಿ ತಿಮ್ಮಾರೆಡ್ಡಿ ಎಂಬುವರಿಗೆ ಸೇರಿದ ತೋಟದಲ್ಲಿ ಘಟನೆ ನಡೆದಿದೆ. 12 ಅಡಿ ಎತ್ತರದಿಂದ ಅಮೃತ ಧಾರೆ ಹರಿಯುತ್ತಿದೆ. ಜನರು ತಂಡೋಪತಂಡವಾಗಿ ಬಂದು ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನು ಕಂಡ ಹಿರಿಯರು ಪೋತುಲೂರಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ  ತಮ್ಮ ಕಾಲಜ್ಞಾನದಲ್ಲಿ ಹೇಳಿದಂತೆ ಆಗುತ್ತಿದೆ ಎಂದು ಚರ್ಚಿಸುತ್ತಿದ್ದಾರೆ. ಆದರೆ ತಮ್ಮ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ತುಂಬಾ ಸಂತಸ ತಂದಿದೆ ಎನ್ನುತ್ತಾರೆ ಗ್ರಾಮದ ಜನರು. ಜೊತೆಗೆ ಆತಂಕಕ್ಕೂ ಸಿಲುಕಿದ್ದಾರೆ. ಮುಂದೆ ಏನಾಗುತ್ತದೋ ಎಂಬ ಆತಂಕ/ ಕುತೂಹಲ ವ್ಯಕ್ತಪಡಿಸಿದ್ದಾರೆ.  

    ಕಳೆದ ಮೂರು ದಿನಗಳಿಂದ ಬೇವಿನ ಮರದಿಂದ ಹಾಲು ಉಕ್ಕುತ್ತಿದೆ ಎಂಬ ವದಂತಿಯಿಂದಾಗಿ ಸುತ್ತಲಿನ ಗ್ರಾಮಗಳ ಜನರು ಬೇವಿನ ಮರವನ್ನು ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಬೇವಿನ ಮರವನ್ನು ಎಲ್ಲಮ್ಮ ದೇವಿಯೆಂದು ಪರಿಗಣಿಸಿ ಅರಿಶಿನ ಮತ್ತು ಕುಂಕುಮದಿಂದ ಪೂಜಿಸಲಾಗುತ್ತಿದೆ. ಆದರೆ ಬೇವಿನ ಮರ ಹಾಲು ಕೊಡುವುದು ಸಹಜ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮರದಿಂದ ಕೆಲವು ರೀತಿಯ ರಾಸಾಯನಿಕವನ್ನು ಬಿಡುಗಡೆ ಮಾಡುವುದರಿಂದ ಬಿಳಿ ಬಣ್ಣದ ದ್ರವವು ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಂತ ಇದು ಜನರು ಸೇವಿಸುವಂತಹ ಹಾಲು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap