ಆಂದ್ರ ಪ್ರದೇಶ :
ಹೊಸದಾಗಿ ಕೋವಿಡ್-19 ಕೇಸ್ ಪತ್ತೆಯಾಗಿರುವುದರಿಂದ ಅತ್ಯವಶ್ಯಕ, ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿದಂತೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಒಳಗಡೆ ಇರುವ ಎಲ್ಲಾ ಕಚೇರಿಗಳನ್ನು ಮುಚ್ಚಲಾಗಿದೆ.
ಘನ ಪ್ರೊಪೆಲ್ಲಂಟ್ ಸ್ಪೇಸ್ ಬೂಸ್ಟರ್ ಪ್ಲಾಂಟ್ ನ (ಎಸ್ ಪಿಆರ್ ಒಬಿ ) ಮತ್ತೊಬ್ಬ ಉದ್ಯೋಗಿ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಹೊಂದಿಕೊಂಡಂತ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸೋಮವಾರ ಪಾಸಿಟಿವ್ ಕಂಡುಬಂದಿದೆ. ಈ ಹಿಂದೆ ಶಾರ್ ಹೌಸಿಂಗ್ ಕಾಲೋನಿಯಿಂದ ಐದು ಕೇಸ್ ಗಳು ವರದಿಯಾಗಿದ್ದವು.
ಪ್ರಕರಣಗಳು ಹೆಚ್ಚಾಗುವುದು ಕಂಡುಬರುತ್ತಿದ್ದಂತೆ ಇಸ್ರೋ ಶ್ರೀಹರಿಕೋಟಾವನ್ನು ಲಾಕ್ ಡೌನ್ ಮಾಡಿದ್ದು, ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯೊಂದಿಗೆ ಸಮಾಲೋಚಿಸಿದ ಬಳಿಕ ಎಸ್ ಡಿಎಸ್ ಸಿ ಶಾರ್ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಏಪ್ರಿಲ್ ಕಳೆದ ವಾರದಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶ್ರೀಹರಿಕೋಟಾದಲ್ಲಿರುವ ಕಾರ್ಮಿಕರಲ್ಲಿಯೂ ಸೋಂಕಿನ
ಭೀತಿ ಕಾಡುತ್ತಿದೆ. ಮುಂದಿನ ಆದೇಶದವರೆಗೂ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ