ಪಾಟ್ನಾ
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬಿಹಾರದ ಐದು ಕ್ಷೇತ್ರಗಳಲ್ಲಿ ನಡೆದಿದ್ದು, ಶೇಕಡಾ 62.52ರಷ್ಟು ಮತದಾನ ನಡೆದಿದೆ.
ಅಮರಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲ ಜನರು ಮತದಾನಕ್ಕೆ ಅಡ್ಡಿ ಪಡಿಸಿದ್ದು ತಿಳಿದುಬಂದಿದೆ. ಭಾಗಲ್ಪುರ ಲೋಕಸಭಾ ಕ್ಷೇತ್ರದ ಗೋಪಾಲಪುರನ ಆರು ಬೂತ್ ಗಳಲ್ಲಿ ಮತದಾನ ಬಹಿಷ್ಕರಿಸಿದ ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಚುನಾವಣಾ ಅಧಿಕಾರಿ ಎಚ್.ಆರ್ ಶ್ರೀನಿವಾಸ್, 8.6 ಲಕ್ಷ ಮತದಾರರಿದ್ದ ಕಿಶಾನ್ ಗಂಜ್, ಪುರ್ನಿಯಾ, ಕಟಿಹಾರ್, ಬಾಗಲ್ಪುರ್, ಬಂಕ ಕ್ಷೇತ್ರಗಳಲ್ಲಿ ಈವರೆಗೆ ಶೇ. 62.52 ಮತದಾನದ ನಡೆದಿದೆ. ಬಾಗಲ್ಪುರ್ ಕ್ಷೇತ್ರದ ಆರು ಬೂತ್ ಗಳಲ್ಲಿ ಮೂಲ ಸೌಕರ್ಯ ಹಾಗೂ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದಿರುವುದನ್ನು ಖಂಡಿಸಿ ಜನ ಮತದಾನವನ್ನು ಬಹಿಷ್ಕರಿಸಿದ್ದಾರೆ.