ಅಟಾರಿ ಗಡಿ : ಪಾಕಿಸ್ತಾನದ ಮತ್ತೊಂದು ದ್ರೋಣ್ ಪತ್ತೆ..!

ನವದೆಹಲಿ

      ಪಂಜಾಬ್‌ನ ಅಟಾರಿ ಗಡಿಯ ಸಮೀಪದಲ್ಲಿ ನೆಲೆಸಿದ್ದಾರೆ ಎನ್ನಲಾಗಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ಬಳಸಿದ ಮತ್ತೊಂದು ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಯೋತ್ಪಾದಕ ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸ್ ಅಧಿಕಾರಿ ಆಕಾಶ್‌ದೀಪ್ ಅವರು ಡ್ರೋನ್ ಶಸ್ತ್ರಗಳನ್ನು ಕೆಳಗಿಳಿಸಿದ ಸ್ಥಳಕ್ಕೆ ಕರೆದೊಯ್ದು ದ್ರೋಣ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭಿಸಸಿದೆ.

    “ಡ್ರೋನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಪಾಕಿಸ್ತಾನಕ್ಕೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ, ಆದ್ದರಿಂದ ಆರೋಪಿಗಳು ಅದನ್ನು ಅಟಾರಿ ಗಡಿಯ ಸಮೀಪವಿರುವ ಹಳ್ಳಿಯೊಂದರಲ್ಲಿ ಬಚ್ಚಟ್ಟಿದ್ದರು” ಎಂದು ಪೊಲೀಸರು ಹೇಳಿದ್ದಾರೆ.

    ಡ್ರೋನ್‌ನ್ನು ಗ್ರಾಮದ ಭತ್ತದ ಗದ್ದೆಯೊಂದರ ಗಿಡಗಂಟಿಗಳ ಕೆಳಗೆ ಅಡಗಿಸಿಡಲಾಗಿತ್ತು. ಅಮೃತಸರದಲ್ಲಿ ಎಕೆ -47 ಅಟ್ಯಾಕ್ ರೈಫಲ್‌ಗಳು ಮತ್ತು ಗ್ರೆನೇಡ್‌ಗಳನ್ನು ಬೀಳಿಸಲು ಭಾರೀ ಭಾರ ಎತ್ತುವ ಡ್ರೋನ್‌ಗಳನ್ನು ಬಳಸಿದ್ದ ಪಾಕಿಸ್ತಾನ , ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ  ಅನುಕೂಲವಾಗುವಂತೆ ಮಾಡಲು ಮತ್ತು ಶಸ್ತ್ರಾಸ್ತ್ರ ಉಗ್ರಾಣದ ರೀತಿಯಲ್ಲಿ ಈ ಜಾಗವನ್ನು ಬಳಸಲಾಗಿತ್ತು ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link