ಬಿಜೆಪಿ ಅಭ್ಯರ್ಥಿ ಮೇಲೆ ಜಾತಿ ನಿಂದನೆ ಪ್ರಕರಣ….!!!

0
37
ಭೋಪಾಲ್: 
       ನಮ್ಮ ರಾಷ್ಟ್ರದಲ್ಲಿ ಮತದಾನ ಗೌಪ್ಯ ಹಾಗಿದ್ದೂ ಇಲಲ್ಲೊಬ್ಬ ಬಿಜೆಪಿ ಕಾರ್ಯಕರ್ತನೊಬ್ಬ ಒಬ್ಬ ದಲಿತನಿಗೆ ನೀನು ಯಾರಿಗೆ ಮತ ಹಾಕಿರುವೆ ಎಂದು ಕೇಳಿ ಆತ ತಾನು ಗೌಪ್ಯವಾಗಿಡಬೇಕಿದ್ದ ವಿಷಯ ಬಾಯಿ ಬಿಟ್ಟ, ಅದುವೇ ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ ಎಂಬ ವಿಚಾರ ಹೇಳಿದ ದಲಿತ ಯುವಕನ ಮೇಲೆ ಬಿಜೆಪಿ ಅಭ್ಯರ್ಥಿ ಮತ್ತು ಪಟಾಲಂ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 
       ನವೆಂಬರ್ 28ರಂದು ನಡೆದ ಘಟನೆಗೆ ಸಂಬಂಧಿಸಿದಂತೆ  ಸುರ್ಖಿ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಸುಧೀರ್ ಯಾದವ್ ವಿರುದ್ಧ ದಲಿತರ ವಿರುದ್ಧ ದೌರ್ಜನ್ಯ ಎಸಗಿರುವ ಪ್ರಕರಣದ ಜೊತೆಗೆ ಐಪಿಸಿ ಕಾಯ್ದೆಯ 294,506,323 ಮತ್ತು 34ರ ಪ್ರಕಾರ ಪ್ರಕರಣ ದಾಖಲಾಗಿವೆ.  ಬಿಜೆಪಿ ಸಂಸದ ಲಕ್ಷ್ಮಿನಾರಾಯಣ್ ಯಾದವ್ ಅವರ ಪುತ್ರ ಸುಧೀರ್ ಯಾದವ್ ಆಗಿದ್ದು, ಕಾಂಗ್ರೆಸ್ ಗೆ ಮತ ಹಾಕಿದ್ದಕ್ಕಾಗಿ ದಲಿತ ಯುವಕ ದೀಪೇಶ್ ಅಹಿರ್ವಾರ್ ಮೇಲೆ ಹಲ್ಲೆ ನಡೆಸಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here