ಐಆರ್​ಸಿಟಿಸಿ ವಿರುದ್ದ 2 ವರ್ಷ ಹೋರಾಡಿ ವ್ಯಕ್ತಿ 33 ರೂ. ಹಿಂಪಾವತಿ ಪಡೆದ ಗ್ರಾಹಕ…!!

ನವದೆಹಲಿ:

     ಇದೊಂದು ವಿರಳಾತಿವಿರಳ ಪ್ರಕರಣ ಎನ್ನಬಹುದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಗೆ ಬರುವ ಮೊದಲು ಮುಂಗಡವಾಗಿ ಕಾಯ್ದಿರಿಸಿದ್ದ ರೈಲು ಟಿಕೆಟ್​ ಅನ್ನು ರದ್ದುಗೊಳಿಸಿದಾಗ ಹೆಚ್ಚುವರಿ 35 ರೂಪಾಯಿ ಕಡಿತಗೊಳಿಸಿಕೊಂಡಿದ್ದ ಐಆರ್​ಸಿಟಿಸಿ ವಿರುದ್ದ 2 ವರ್ಷ ಹೋರಾಡಿದ ವ್ಯಕ್ತಿ 33 ರೂ. ಹಿಂಪಾವತಿ ಪಡೆದುಕೊಂಡರು. ಆದರೆ ಈಗ ಕಡಿತಗೊಳಿಸಲಾಗಿರುವ 2 ರೂಪಾಯಿಗಾಗಿ ಹೊಸದಾಗಿ ಹೋರಾಟ ಆರಂಭಿಸಿದ್ದಾರೆ.

       ಕೋಟಾ ಮೂಲದ ಸುಜಿತ್​ ಎಂಬವವರು 30 ವರ್ಷದ ಇಂಜಿನಿಯರ್​ 2017ರ ಜುಲೈ 2ರಂದು ಕೋಟಾದಿಂದ ದೆಹಲಿಗೆ ತೆರಳಲು ಗೋಲ್ಡನ್​ ಟೆಂಪಲ್​ ಮೇಲ್​ ರೈಲಿನಲ್ಲಿ ಮುಂಗಡವಾಗಿ ಟಿಕೆಟ್​ ಕಾಯ್ದಿರಿಸಿದ್ದರು. ಆಗಿನ್ನೂ ಜಿಎಸ್​ಟಿ ಕೂಡ ಜಾರಿಗೆ ಬಂದಿರಲಿಲ್ಲ. 765 ರೂ. ಟಿಕೆಟ್​ ಶುಲ್ಕ ಪಾವತಿಸಿದ್ದರೂ ಅವರ ಟಿಕೆಟ್​ ಕನ್ಫರ್ಮ್​ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಟಿಕೆಟ್​ ಅನ್ನು ರದ್ದುಗೊಳಿಸಿದ್ದರು. ತೆರಿಗೆ ಸಹಿತವಾಗಿ 100 ರೂ. ಕಡಿತಗೊಳಿಸಿದ್ದ ಐಆರ್​ಸಿಟಿಸಿ 665 ರೂ.ಗಳನ್ನು ಸುಜಿತ್​ ಅವರ ಖಾತೆಗೆ ವರ್ಗಾವಣೆ ಮಾಡಿತ್ತು.

        ವಾಸ್ತವವಾಗಿ ಐಆರ್​ಸಿಟಿಸಿ 65 ರೂಪಾಯಿ ಮಾತ್ರ ​ ಶುಲ್ಕವನ್ನು ಮಾತ್ರ ಕಡಿತಗೊಳಿಸಿಕೊಂಡು ಉಳಿದ ಮೊತ್ತ ಹಿಂದಿರುಗಿಸ ಬೇಕಿತ್ತು. ಆದರೆ, 65 ರೂಪಾಯಿ ಮತ್ತು ಸೇವಾ ತೆರಿಗೆ ರೂಪದಲ್ಲಿ 35 ರೂಪಾಯಿ ಸೇರಿಸಿ 100 ರೂಪಾಯಿಗಳನ್ನು ಕಡಿತಗೊಳಿಸಿ ಕೊಂಡಿತ್ತು. ಈ ಹಿನ್ನೆಲೆಯಲ್ಲಿ 35 ರೂ.ಗಳನ್ನು ಹಿಂಪಡೆಯಲು 2017ರಿಂದ ಹೋರಾಟ ಆರಂಭಿಸಿದ್ದಾಗಿ ಸುಜಿತ್​ ತಿಳಿಸಿದ್ದಾರೆ.

      ಜಿಎಸ್​ಟಿ ಜಾರಿಗೆ ಬರುವ ಮುನ್ನವೇ 35 ರೂಪಾಯಿ ಸೇವಾ ತೆರಿಗೆ ಕಡಿತಗೊಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಣ ಹಿಂದಿರುಗಿಸುವಂತೆ ಮನವಿ ಮಾಡಿದಾಗಲೆಲ್ಲ ಐಆರ್​ಸಿಟಿಸಿ ಕೊಡುವುದಾಗಿ ಭರವಸೆ ನೀಡಿತ್ತೇ ಹೊರತು, ಹಣ ಹಿಂದಿರುಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ, ಜಿಎಸ್​ಟಿ ಜಾರಿಗೆ ಬರುವ ಮುನ್ನ ಟಿಕೆಟ್​ ಅನ್ನು ಮುಂಗಡವಾಗಿ ಕಾಯ್ದಿರಿಸಿದ್ದು, ಜಾರಿಗೆ ಬಂದ ಬಳಿಕ ರದ್ದುಗೊಳಿಸಿದ್ದರೆ ಸೇವಾ ತೆರಿಗೆ ಕಡಿತಗೊಳಿಸಿಕೊಂಡು ಬಾಕಿ ಮೊತ್ತವನ್ನು ಹಿಂದಿರುಗಿಸಬಹುದು ಎಂಬ ಒಕ್ಕಣೆಯುಳ್ಳ ವಾಣಿಜ್ಯ ಸುತ್ತೋಲೆ ನಂ.43ರ ಉದಾಹರಣೆ ನೀಡಿತ್ತು.

       ಜಿಎಸ್​ಟಿ ಜಾರಿಗೆ ಬರುವ ಮೊದಲು ಮುಂಗಡವಾಗಿ ಟಕೆಟ್​ ಕಾಯ್ದಿರಿಸಿದ್ದು, ಜಿಎಸ್​ಟಿ ಜಾರಿಗೆ ಬಂದ ಬಳಿಕ ಟಿಕೆಟ್​ ಅನ್ನು ರದ್ದುಗೊಳಿಸಿದ್ದರೆ ಸೇವಾ ತೆರಿಗೆ ಕಡಿತಗೊಳಿಸಿಕೊಳ್ಳಬಾರದು ಎಂದು ಐಆರ್​ಸಿಟಿಸಿ ತೀರ್ಮಾನಿಸಲಾಗಿದೆ. ಆದ್ದರಿಂದ, ಸೇವಾ ತೆರಿಗೆ ರೂಪದಲ್ಲಿ ಕಡಿತಗೊಳಿಸಲಾಗಿರುವ 35 ರೂ.ಗಳನ್ನು ಹಿಂದಿರುಗಿಸುವುದಾಗಿ ಐಆರ್​ಸಿಟಿಸಿ ಸುಜಿತ್​ ಸ್ವಾಮಿಗೆ ತಿಳಿಸಿತ್ತು. ಆದರೆ, ಹಣವನ್ನು ಕೊಟ್ಟಿರಲಿಲ್ಲ.

        2018ರಲ್ಲಿ ಲೋಕ್​ ಅದಾಲತ್​ನಲ್ಲಿ ದೂರು ದಾಖಲಿಸಿದ್ದ ಸುಜಿತ್​ ಸ್ವಾಮಿ ಅವರ ಈ ಅರ್ಜಿಯ ವಿಚಾರಣೆ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದ ಲೋಕ್​ ಅದಾಲತ್​ನ ನ್ಯಾಯಮೂರ್ತಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಕೊನೆಗೂ ಬಿಟ್ಟುಬಿಡದೆ ಹೋರಾಟ ಮುಂದುವರಿಸಿದ ಸುಜಿತ್​ಗೆ 2019ರ ಮೇ 1ರಂದು ನ್ಯಾಯ ದೊರಕಿದೆ. ಆದರೆ, ವಾಗ್ದಾನದಂತೆ 35 ರೂ. ಬದಲು 33 ರೂ.ಗಳನ್ನು ಅವರ ಖಾತೆಗೆ ಐಆರ್​ಸಿಟಿಸಿ ವರ್ಗಾಯಿಸಿದೆ. ಈಗ ಮತ್ತಿಮ್ಮೆ 2 ರೂ ಗೋಸ್ಕರ ಕೋರ್ಟ್ ಮೆಟ್ಟಿಲೇರಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link