ನವದೆಹಲಿ:
ದೇಶದಲ್ಲಿಯೇ ದೊಡ್ಡ ಹಗರಣವಾಗಿದ್ದ ಅಗಾಸ್ಟಾವೆಸ್ಟ್ ಲ್ಯಾಂಡ್ ಚಾಪರ್ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ವ್ಯವಹರಿಸಿದ ಕ್ರಿಶ್ಚಿ ಯನ್ ಮೈಕೆಲ್ ಪಾಲಿಗೆ ಜೈಲುವಾಸವೇ ಗಟ್ಟಿಯಾಗಿದೆ. ಜೈಲಿನಲ್ಲಿ ತಾನು ಕೊರೋನಾ ವೈರಸ್ ಸೋಂಕು ತಗುಲುವ ಭೀತಿಯಿಂದ ಜಾಮೀನು ನೀಡಬೇಕೆಂದು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ದು ಇಂದು ವಜಾ ಮಾಡಿ ಆದೇಶ ನೀಡಿದೆ.
ನ್ಯಾ. ಮುಕ್ತಾ ಗುಪ್ತಾ ಜಾಮೀನು ವಜಾಗೊಳಿಸಿದ ಅವರು ಕೊರೋನಾ ಸೋಂಕಿನ ಭೀತಿ ಆಧಾರರಹಿತವಾಗಿದೆ.ಏಕೆಂದರೆ ಆರೋಪಿ ಕೇವಲ ಇಬ್ಬರು ಕೈದಿಗಳೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಾರೆ ಹೊರತು ಆದ್ದರಿಂದ, ಹಲವಾರು ಕೈದಿಗಳು ಇರುವ ಬ್ಯಾರಕ್ ಅಥವಾ ವಸತಿ ನಿಲಯದಲ್ಲಿಲ್ಲ ಎಂದರು.
ಅರ್ಜಿದಾರರ ಜೊತೆ ವಾಸಿಸುತ್ತಿರುವ ಇಬ್ಬರು ಕೈದಿಗಳಲ್ಲಿ ಯಾರಾದರೂ ಕೋವಿಡ್ ರೋಗದ ಸೋಂಕಿನಿಂದ ಬಳಲುತ್ತಿದ್ದಾರೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಕೊರೋನಾ ವೈರಸ್ ಭಯದ ನಡುವೆ ರಾಷ್ಟ್ರ ರಾಜಧಾನಿಯಲ್ಲಿನ ಕಾರಾಗೃಹಗಳನ್ನು ಖೈದಿಗಳ ದಟ್ಟಣೆಯಿಂದ ಮುಕ್ತವಾಗಿಸಲು ಸ್ಥಾಪಿಸಲಾಗಿರುವ ಹೈ ಪವರ್ ಕಮಿಟಿ ನಿಗದಿಪಡಿಸಿದ ಮೂರು ಮಾನದಂಡಗಳಿಗೆ ಅರ್ಹತೆ ಪಡೆಯಲು ಅರ್ಜಿದಾರರು ವಿಫಲರಾಗಿದ್ದಾರೆ ಹಾಗಾಗಿ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವಿಲ್ಲ, ವಿದೇಶಿ ಪ್ರಜೆಗಳು, ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಇರುವ ಪ್ರಕರಣಗಳಲ್ಲಿ ಜಾಮೀನು ಕೊಡದಿರಲು ತೀರ್ಮಾನಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ