ಜಮ್ಮು
ಜಮ್ಮು-ಕಾಶ್ಮೀರದ ವೈಷ್ಣೋ ದೇವಿ ದರ್ಶನ ಪಡೆಯುವ ಭಕ್ತರ ಸಂಖ್ಯೆ ಕಳೆದ ಮೂರು ತಿಂಗಳಲ್ಲಿ ಇಳಿಮುಖವಾಗಿದ್ದು, ಪ್ರಸಕ್ತ ಸಾಲಿನಲ್ಲಿ 12 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ದೇವಿ ದರ್ಶನ ಪಡೆದಿದ್ದಾರೆ.
ಜಮ್ಮು-ಕಾಶ್ಮೀರದ ತ್ರಿಕುಟಾ ಪರ್ವದಲ್ಲಿರುವ ವೈಷ್ಣೋದೇವಿ ಗುಹೆ ದೇವಸ್ಥಾನಕ್ಕೆ 2018ರಲ್ಲಿ 84 ಲಕ್ಷ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದರು.
ಪ್ರಸಕ್ತ ಸಾಲಿನ ಮೂರು ತಿಂಗಳಲ್ಲಿ 12,33,088 ಲಕ್ಷ ಯಾತ್ರಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಕಳೆದ ವರ್ಷದ ಆರಂಭಿಕ ಮೂರು ತಿಂಗಳಲ್ಲಿ 16,85,959 ಭಕ್ತರು ದೇವಿ ದರ್ಶನ ಪಡೆದಿದ್ದರು ಎಂದು ದೇವಸ್ಥಾನ ಮಂಡಳಿಯ ಅಧಿಕೃತ ಮೂಲಗಳು ತಿಳಿಸಿವೆ.
ಜನವರಿ ತಿಂಗಳಲ್ಲಿ 50,18,80 ಸಾವಿರ ಯಾತ್ರಾರ್ಥಿಗಳು ದೇವಿಗೆ ಭಕ್ತಿ ಸಮರ್ಪಿಸಿದ್ದು, ಫೆಬ್ರವರಿಯಲ್ಲಿ 26,9739 ಹಾಗೂ ಮಾರ್ಚ್ ತಿಂಗಳಲ್ಲಿ 46,23,69 ಯಾತ್ರಿಗಳು ಭೇಟಿ ನೀಡಿದ್ದರು. 2018ರ ಜನವರಿ ತಿಂಗಳಲ್ಲಿ 5,45,945, ಫೆಬ್ರವರಿಯಲ್ಲಿ 3,43,162 ಹಾಗೂ ಮಾರ್ಚ್ ತಿಂಗಳಲ್ಲಿ 7,96,852 ಭಕ್ತರು ಆಗಮಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
