ವಯನಾಡ್
ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಸಮೀಪ ಪೂಥುಮಲ ಎಂಬಲ್ಲಿ ಸಂಭವಿಸಿದ ಭಾರೀ ಕುಸಿತಕ್ಕೆ ಇಡೀ ಗ್ರಾಮ ನೆಲಸಮವಾಗಿದ್ದು, ಸುಮಾರು 30ರಿಂದ 40 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ರಾತ್ರಿ ಸುಮಾರು 100 ಎಕರೆಯಷ್ಟು ಭೂಮಿ ಕುಸಿದಿದೆ. ಸ್ಥಳಕ್ಕೆ ಇಂದು ಬೆಳಗ್ಗೆ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದಾಗ ಇಡೀ ಗ್ರಾಮ ಸಂಪೂರ್ಣ ನೆಲಸಮಯವಾಗಿರುವುದು ಕಂಡುಬಂದಿದೆ.
ಸುಮಾರು 30ರಿಂದ 40 ಜನರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಅಧಿಕೃವಾಗಿ ಇನ್ನೂ ತಿಳಿದುಬಂದಿಲ್ಲ.ಒಂದು ಚರ್ಚ್, ಒಂದು ದೇವಸ್ಥಾನ, ತೋಟದ ಕಾರ್ಮಿಕರು ನೆಲೆಸಿದ್ದ 2ರಿಂದ 3 ಶಿಬಿರಗಳು ಮತ್ತು ಇತರ ಕೆಲವು ಮನೆಗಳು ಧರಾಶಾಹಿಯಾಗಿವೆ.ಮಣ್ಣನ್ನು ತೆರವುಗೊಳಿಸಿದ ಬಳಿಕವಷ್ಟೇ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದ ಅಂದಾಜು ಸಿಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸಂಪರ್ಕ ಕೊರತೆ ಮತ್ತು ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ತಂಡಕ್ಕೆ ಪರಿಹಾರ ಕಾರ್ಯ ಕೈಗೊಳ್ಳಲು ಅಡಚಣೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








