ಲೋಕಸಭೆ : ಆಗಸ್ಟ್ 7 ರವರೆಗೆ ಕಲಾಪ ವಿಸ್ತರಣೆ..!!

ನವದೆಹಲಿ

       ಪ್ರಸ್ತುತ ನಡೆಯುತ್ತಿರು ಬಜೆಟ್ ಅಧಿವೇಶನದಲ್ಲಿ ಲೋಕಸಭೆಯ ಕಲಾಪವನ್ನು ಆಗಸ್ಟ್ 7 ವರೆಗೆ ವಿಸ್ತರಿಸಲಾಗಿದೆ . ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗುರುವಾರ ಸದನದಲ್ಲಿ ಈ ವಿಷಯ ಘೋಷಿಸಿದ್ದಾರೆ. ಇನ್ನೂ 17 ಮಸೂದೆ ಮಂಡನೆ ಬಾಕಿ ಇದ್ದು ಕಲಾಪದ ಅವಧಿಯನ್ನು ವಿಸ್ತರಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮನವಿ ಮಾಡಿದ ನಂತರ ಬಿರ್ಲಾ ಈ ಪ್ರಕಟಣೆ ನೀಡಿದ್ದಾರೆ.

       ಸದಸ್ಯರ ಅದರಲ್ಲೂ ಇದೇ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದವರು ಹೆಚ್ಚು ಉತ್ಸುಕರಾಗಿದ್ದು, ಪ್ರಮುಖ ಮಸೂದೆಗಳ ಮಂಡನೆಗೆ ಅವಕಾಶ ನೀಡಲು ಸರ್ಕಾರ ಪ್ರಸ್ತುತ ನಡೆಯುತ್ತಿರುವ ಅಧಿವೇಶನವನ್ನು 7 ರಿಂದ 10 ದಿನಗಳವರೆಗೆ ವಿಸ್ತರಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link