ಕೊಯಮತ್ತೂರು: 

ಕರ್ನಾಟಕದ ಪಾಲಿಗೆ ಅತಿ ಸಂತೊಷದ ವಿಷಯವಾದ ಕಾವೇರಿ ನೀರಿನ ಅಣೆಕಟ್ಟಿನ ವಿಷಯದಲ್ಲಿ ತಮಿಳುನಾಡಿಗೆ ಬೇಸರ ಮೂಡಿಸಿದರು ಸುಮ್ಮನಿದ್ದ ತಮಿಳರು ಈಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮೇಕೆದಾಟಿನಲ್ಲಿ ಕರ್ನಾಟಕ ರಾಜ್ಯ ಅಣೆಕಟ್ಟು ನಿರ್ಮಾಣ ಮಾಡುವ ಸಂಗತಿ ಸರಿಯಲ್ಲ ಮತ್ತು ಸ್ವೀಕಾರ ಯೋಗ್ಯವಲ್ಲ. ಅಣೆಕಟ್ಟು ಕಟ್ಟುವಂತಹ ಪರಿಸ್ಥಿತಿಯೇ ಉದ್ಭವಿಸುವುದೂ ಇಲ್ಲ ಎಂದು ತಮಿಳುನಾಡಿನ ಕನ್ಯಾಕುಮಾರಿಯ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕರ್ನಾಟಕ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಕಟ್ಟಲು ಉದ್ದೇಶಿಸಿರುವ ಕುಡಿಯುವ ನೀರಿನ ಉದ್ದೇಶದ ಅಣೆಗಟ್ಟೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಣೆಕಟ್ಟು ಕಟ್ಟುವುದು ಸ್ವೀಕಾರ್ಹವಲ್ಲ. ಅಂತಹ ಪರಿಸ್ಥಿತಿ ಉದ್ಭವಿಸುವುದೂ ಇಲ್ಲ ಎಂದು ಹೇಳುವ ಮೂಲಕ ತಮ್ಮ ರಾಜ್ಯದವರ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








