ನ್ಯಾಷನಲ್ ಹೆರಾಲ್ಡ್ : ಇದು ಚಾಯ್ ವಾಲಾನ ಗೆಲುವು…!!

0
55

ಪಾಲಿ:

         ಇಷ್ಟು ದಿನ ಮೋದಿಯ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದ ರಾಹುಲ್ ಗಾಂಧಿ ಮತ್ತು ಪಕ್ಷದವರಿಗೆ ತಲೆ ತಗ್ಗಿಸುವಂತಾಗಿದೆ ಏಕೆಂದರೆ ನೆನ್ನೆ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಿಂದ ಅವರಿಗೆ ಶಾಕ್ ಆಗಿದೇ ಅವರ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಭಂದಿಸಿದಂತೆ ತನಿಖೆ ನೆಡಸುವಂತೆ ಕೋರ್ಟ್ ಆದೇಶ ನೀಡಿದೆ ಇದರಿಂದಾಗಿ ರಾಹುಲ್ ಗಾಂಧಿ ಹಾಗು ಸೋನಿಯಾಗಾಂಧಿ ವಿರುದ್ಧದ ಐಟಿ ಪ್ರಕರಣಗಳನ್ನು ಪುನಃ ಆರಂಭಿಸುವುದಕ್ಕೆ ಸಮ್ಮತಿಸಿದ  ಬೆನ್ನಲ್ಲೇ  ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಕ್ ಪ್ರಹಾರ ಆರಂಭವಾಗಿದೆ .

         ಇಂದು ರಾಜಸ್ತಾನದ ಸುಮೆರ್ ಪುರದ ಚುನಾವಣಾ ಪ್ರಚಾರಕ್ಕಾಗಿ ಬಂದ ಮೋದಿ ತಮ್ಮ ವಿರುಧ ಬಂದಿದ್ದ ಎಲ್ಲಾ ಆರೋಪಗಳಿಗೆ ಉತ್ತರಿಸಿದ್ದಲ್ಲದೇ ಈ ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ ಇದು ಸುಪ್ರೀಂಕೋರ್ಟ್ ನಲ್ಲಿ ಸರ್ಕಾರಕ್ಕೆ ದೊರೆತ ಜಯ , ಚಾಯ್ ವಾಲಾನ ಧೈರ್ಯ ಎದಿರು ಯಾರು ಸಮರಿಲ್ಲ ಮತ್ತು ಅಂತಹ ಧೈರ್ಯ ಪ್ರಶಂಸನಾರ್ಹ.

         ನಮ್ಮ ದೇಶದಲ್ಲಿ ತೆರಿಗೆ ಕಟ್ಟಿ ದೇಶದ ಪ್ರಗತಿಯಲ್ಲಿ ಭಾಗಿಯಾಗುವ 90% ಮಂದಿಯಿದ್ದಾರೆ ಆದರೆ ಮಿಕ್ಕ 10% ಮಂದಿ ತಮ್ಮ ಬಳಿ ಎಷ್ಟು ಹಣದ ಸಂಗ್ರಹವಿದೇ ಎಂಬ ಅರಿವೇ ಇಲ್ಲದೇ ಪಾಪ ತೆರಿಗೆ ವಂಚನೆಯಂತಹ ಪ್ರಕರಣಗಳಿಗೆ ಸಿಲುಕುತ್ತಾರೆ ಅಂತಹವರಿಗೆ ಸಹಾಯ ಮಾಡಲೆಂದೆ ನಾನು ಈ ಪ್ರಕರಣ ಬೆಳಕಿಗೆ ತಂದಿದ್ದೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here