ತಿರುವನಂತಪುರಂ
ಕೇರಳ ಸರ್ಕಾರವು ಸರ್ಕಾರಿ ಉದ್ಯೋಗಿಗಳ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ.ವಿವಿಧ ಹಂತಗಳಲ್ಲಿ ಈ ಹಣವನ್ನು ವಾಪಸ್ ನೀಡಲಾಗುವುದು, ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದನೆಗೊಳ್ಳಲಿದ್ದು ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
ಕಡಿತಗೊಳಿಸಿದ ಒಂದು ತಿಂಗಳ ಸಂಬಳವನ್ನು ನಿರ್ದಿಷ್ಟ ಅವಧಿಯ ನಂತರ ಅವರಿಗೆ ಮರುಪಾವತಿ ಮಾಡಲಾಗುತ್ತದೆ. ಎಲ್ಲಾ ವಿಭಾಗದ ಸರ್ಕಾರಿ ನೌಕರರ ಆರು ದಿನಗಳ ವೇತನವನ್ನು ಐದು ತಿಂಗಳಲ್ಲಿ ಕಡಿತಗೊಳಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಸಲ್ಲಿಸಿದೆ.
ಕೇರಳದಲ್ಲಿ 408 ಮಂದಿಗೆ ಕೊರೊನಾ ಸೋಂಕಿದೆ. ಮೂರು ಮಂದಿ ಮೃತಪಟ್ಟಿದ್ದಾರೆ. ದೇಶಾದ್ಯಂತ 19,984 ಮಂದಿ ಕೊರೊನಾ ಸೋಂಕಿತರಿದ್ದು 3870 ಮಂದಿ ಗುಣಮುಖರಾಗಿದ್ದಾರೆ. 640 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.








