ಸಿಧು ಪಾಕ್ ಪ್ರವಾಸ : ನನಗೆ ರಾಹುಲ್ ಆದೇಶ ನೀಡಿಲ್ಲ…!!

ನವದೆಹಲಿ: 
         ನಾನು ನಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ನಾನು  ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಹೇಳಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಇದೀಗ ಮಾತು ಬದಲಿಸಿದ್ದಾರೆ ನಾನು ಪಾಕಿಸ್ತಾನಕ್ಕೆ ಹೋಗಿದ್ದು ರಾಹುಲ್ ಆದೇಶದಿಂದಲ್ಲ ಬದಲಾಗಿ ನನ್ನ ಆಪ್ತ ಮಿತ್ರ ಇಮ್ರಾನ್ ಖಾನ್ ನೀಡಿದ ಆಹ್ವಾನದ ಮೇರೆಗೆ ಎಂದು ಉಲ್ಟಾ ಹೊಡೆದಿದ್ದಾರೆ.

 

      ಅವರು ತಮ್ಮ ಹೇಳಿಕೆ ಬದಲಾಯಿಸಿದ್ದಲ್ಲದೇ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ ಯಾರಾದರು ನೀಡಿದ ಹೇಳಿಕೆ ತಿರುಚುವುದಕ್ಕೂ ಮುನ್ನ ಸತ್ಯಾಸತ್ಯಯನ್ನು ಮೊದಲು ತಿಳಿದುಕೊಳ್ಳಿ. ಪಾಕಿಸ್ತಾನಕ್ಕೆ ಹೋಗಿ ಬನ್ನಿ ಎಂದು ರಾಹುಲ್ ಎಂದಿಗೂ ನನಗೆ ಹೇಳಿಯೇ ಇಲ್ಲ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ನೀಡಿದ ವೈಯಕ್ತಿಕ ಆಹ್ವಾನ ಮೇರೆಗೆ ನಾನು ಪಾಕಿಸ್ತಾನಕ್ಕೆ ತೆರಳಿದ್ದಾಗಿ ತಮ್ಮ   ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link