ನವದೆಹಲಿ
ತಿಂಗಳ ಆರಂಭದಿಂದಲೇ ಕುಸಿತದ ಹಾದಿ ಹಿಡಿದ ಚಿನ್ನ, ಬೆಳ್ಳಿ ದರ ದೇಶೀಯ ಮಾರುಕಟ್ಟೆಯಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡಿದೆ. ಈ ಮೂಲಕ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.ಚಿನ್ನದ ಬೆಲೆ ಶೇ.0.04ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 37,671 ರೂ. ಆಗಿದೆ. ಸೆಪ್ಟೆಂಬರ್ ಆರಂಭದಲ್ಲಿ ಇದ್ದ ಚಿನ್ನದ ದರಕ್ಕಿಂತ ಬರೋಬ್ಬರಿ 2,300 ರೂ.ಇಳಿಕೆ ಕಂಡಿದೆ.
ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ, ಮಲ್ಟಿ ಕಮೋಡಿಟಿ ಎಕ್ಸಚೇಂಜ್ ನಲ್ಲಿ ಶೇ.0.30ರಷ್ಟು ದರದಲ್ಲಿ ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 44,000 ರೂ. ಇದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲೂ ಶೇ.0.24ರಷ್ಟು ಇಳಿಕೆ ಕಂಡಿದೆ. ಒಂದು ಔನ್ಸ್ ಚಿನ್ನದ ಬೆಲೆ 1,455.55 ಡಾಲರ್ ಆಗಿದೆ.ಚಿನ್ನದ ಬೆಲೆಯಲ್ಲಿನ ನಿರಂತರ ಇಳಿಕೆಯಿಂದ ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಕಾಣುವ ಸಂಭವವಿದೆ ಎನ್ನಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








