ಕೇರಳ
ರಾಜ್ಯದಲ್ಲಿನ ಪ್ರವಾಹ 76 ಜನರನ್ನು ಬಲಿ ಪಡೆದಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು ಅವರನ್ನು ಹತ್ತಿರದ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. 58 ಜನರು ಇನ್ನೂ ಕಾಣೆಯಾಗಿದ್ದಾರೆ, ಅವರಲ್ಲಿ 50 ಮಂದಿ ಮಲಪ್ಪುರಂಗೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಪ್ರವಾಹದಲ್ಲಿ ಹೇಗೊ ಮಾಡಿ ಪ್ರಾಣಾಪಾಯದಿಂದ ಪಾರಾಗಿರುವವರ ಪೈಕಿ 32 ಮಂದಿಗೆ ಗಾಯಗಳಾಗಿವೆ. ಮಲಪ್ಪೂರಂನ ಮೆಪ್ಪಾಡಿ, ವಯನಾಡ್ ಮತ್ತು ಕವಲಪಾರದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯಾ ಮುಂದುವರೆದಿದೆ.
ಆಗಸ್ಟ್ 8 ರಿಂದ ಮಲಪ್ಪುರಂನಿಂದ 24, ಕೋಜಿಕೋಡ್ ನಿಂದ 17 ಮತ್ತು ವಯನಾಡ್ ನಿಂದ 12 ಮೃತದೇಹಗಳು ಪತ್ತೆಯಾಗಿವೆ ಇದರಿಂದಾಗಿ ಮೃತರ ಸಂಖ್ಯೆ 76ಕ್ಕೆ ಏರಿಕೆ ಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಮತ್ತು ರಕ್ಷಣಾ ತಂಡಗಳು ತಮ್ಮ ಮನೆಗಳಿಂದ ಸ್ಥಳಾಂತರಗೊಂಡವರಿಗೆ ಆಹಾರ, ಬಟ್ಟೆ, ಔಷಧಿಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಜನ ಬಕ್ರಿದ್ ಅನ್ನು ತೀರಾ ದುಖಃದಲ್ಲಿ ಆಚರಿಸುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
